Trending

ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ : ಸಮೀಕ್ಷಾ ಮಾವ ಗಂಭೀರ ಆರೋಪ

Spread the love

ಶಿವಮೊಗ್ಗ :  ಹುಲಿಧಾಮದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಾಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಮೃತ ಸಮೀಕ್ಷಾ ರೆಡ್ಡಿ ಮಾವ ನವೀನ್ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಂದಿನಿಂದಲೂ ಕಾಡು ಪ್ರಾಣಿಗಳೆಂದರೆ ಸಮೀಕ್ಷಾಗೆ ಹೆಚ್ಚು ಪ್ರೀತಿ. ನೂರಾರು ಕೋಟಿ ರೂ ಆಸ್ತಿ ಇದ್ರೂ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಮದುವೆ ಮಾಡಿಕೊಳ್ಳುವ ಯೋಚನೆ ಕೂಡ ಸಮೀಕ್ಷಾಗೆ ಇರಲಿಲ್ಲ. ಅಧಿಕಾರಿಗಳೇ ಹಾಸ್ಟೆಲ್ ಬಳಿ ಜೀಪ್ ಕಳುಹಿಸಿದ್ದಾರೆ.

ಹಾಸ್ಟೆಲ್ ವಾರ್ಡನ್ ಇಬ್ಬರು ಯುವತಿಯರನ್ನ ಜೊತೆಗೆ ಕಳಿಸಿದ್ದಾರೆ. ಒಬ್ಬ ಹುಡುಗಿಯನ್ನು ನೀರಾನೆ ಬಳಿ ಕಳಿಸಲು ಕಾಮನ್​ಸೆನ್ಸ್ ಬೇಕು. 20 ಸಿಂಹಗಳು ಸಹ ಒಂದು ನೀರಾನೆ ಸಮೀಪ ಹೋಗಲ್ಲ, ಅದರಲ್ಲೂ ನೀರಾನೆ ಗರ್ಭಿಣಿ ಇದ್ದು ಭಯ ಇರುತ್ತೆ. ವೈಲ್ಡ್‌ಲೈಫ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದಿದ್ದಾರೆ.

[pj-news-ticker]