Trending

ಪಶ್ಚಿಮ ಬಂಗಾಳ, ಕೇರಳಂ ಸೇರಿ 5 ವಿಧಾನಸಭೆಗಳ ಚುನಾವಣೆ ದಿನಾಂಕ ಘೋಷಣೆ

Spread the love

ದೆಹಲಿ : ದೇಶದ ರಾಜಕೀಯ ದಿಕ್ಕನ್ನೇ ಬದಲಿಸಬಲ್ಲ, ಬಹುನಿರೀಕ್ಷಿತ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳಂ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಚುನಾವಣೆಯ ದಿನಾಂಕವನ್ನು ಪ್ರತಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಪ್ರಕಟಿಸಿದರು. ಚುನಾವಣೆಯ ದಿನಾಂಕ ಘೋಷಣೆಯೊಂದಿಗೆ ಮದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಯಾವ ರಾಜ್ಯದಲ್ಲಿ ಯಾವಾಗ?

ಅಸ್ಸಾಂ: ಅಸ್ಸಾಂನಲ್ಲಿ ಏಪ್ರಿಲ್‌ 9ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಳೆದ ಬಾರಿ ಇಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ 75 ಸೀಟ್‌ಗಳಲ್ಲಿ ಜಯ ಗಳಿಸಿತ್ತು. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ 2ನೇ ಬಾರಿಗೆ ಸಿಎಂ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದ್ದಾರೆ. ಅದಾಗ್ಯೂ ಕಾಂಗ್ರೆಸ್‌ ಕೂಡ ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ.

ಪಶ್ಚಿಮ ಬಂಗಾಳ: ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿಬಲ್ಲ ಸಾಮರ್ಥ್ಯ ಹೊಂದಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 2 ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್‌ 23 ಹಾಗೂ 29ರಂದು ಮತದಾನ ನಡೆಯಲಿದೆ. ಮೇ4ರಂದು ಫಲಿತಾಂಶ ಘೋಷಣೆಯಾಗಲಿದೆ.

ತಮಿಳುನಾಡು: ದಕ್ಷಿಣ ಭಾರತದ ಬಹುಮುಖ್ಯ ರಾಜ್ಯ ತಮಿಳುನಾಡಿನಲ್ಲಿ ಎಪ್ರಿಲ್‌ 23ರಂದು ಒಂದೇ ಹಂತದಲ್ಲಿ ಮತದಾನ ಆಯೋಜಿಸಲಾಗಿದೆ. ಮತ ಎಣಿಕೆ ಮೇ 4ರಂದು ನಡೆಯಲಿದೆ.

ಕೇರಳಂ: ದಕ್ಷಿಣ ಮತ್ತೊಂದು ಪ್ರಮುಖ ರಾಜ್ಯ ಕೇರಳಂನಲ್ಲೂ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್‌ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 4ರಂದು ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಪುದುಚೆರಿ: ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ಮತದಾರರು ಏಪ್ರಿಲ್‌ 9ರಂದು ಹಕ್ಕು ಚಲಾಯಿಸಲಿದ್ದಾರೆ. ಮೇ 4ರಂದು ಮತ ಎಣಿಸಲಾಗುತ್ತದೆ.

[pj-news-ticker]