Trending

ಶಿವಮೊಗ್ಗ: ಶಾದಿಮಹಲ್ ಗಳಲ್ಲಿ ಆಭರಣ ಕದಿಯುತ್ತಿದ್ದ ಕಳ್ಳಿ ಸೆರೆ

Spread the love

ಶಿವಮೊಗ್ಗ: ನಗರದ ವಿವಿಧ ಶಾದಿಮಹಲ್ ಗಳಲ್ಲಿ ಮದುವೆಯ ಸಮಯದಲ್ಲಿ ಆಭರಣ, ನಗದನ್ನು ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಸೂಳೆಬೈಲ್ ವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತೆ.

ತುಂಗಾನಗರ ಪೊಲೀಸ್ ಠಾಣೆಯ 4 ಪ್ರಕರಣಗಳಲ್ಲಿ 18 ಲಕ್ಷ  ರೂ. ಅಂದಾಜು ಮೌಲ್ಯದ 120 ಗ್ರಾಂ ಬಂಗಾರದ ಆಭರಣಗಳನ್ನು ಈಕೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್ಪಿ ಬಾಬು ಅಂಜನಪ್ಪ, ತುಂಗಾನಗರ ಇನ್ಸ್‌ಪೆಕ್ಟರ್ ಕೆ.ಟಿ ಗುರುರಾಜ್, ಎಸ್ ಐ ಗಾದಿಲಿಂಗಪ್ಪ ಗೌಡರ್ ನೇತೃತ್ವದ ತಂಡ ಕಳ್ಳಿಯನ್ನು ಬಂಧಿಸಿದ್ದಾರೆ.

[pj-news-ticker]