ರಾಂಚಿ : ಐಪಿಎಲ್ ಆಡಲು ಚೆನ್ನೈಯಲ್ಲಿ ಅಭ್ಯಾಸ ನಿರತರಾಗಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ 1000 ರೂ. ದಂಡ ವಿಧಿಸಲಾಗಿದೆ.
ಧೋನಿ ತಮ್ಮ ರಾಂಚಿಯಲ್ಲಿರುವ ತಮ್ಮ ನಿವಾಸದ ಬಳಿ ಅತಿ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರು. ಹೀಗಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 183 ರ ಅಡಿಯಲ್ಲಿ ಅವರಿಗೆ ಇ-ಚಲನ್ ನೀಡಲಾಗಿದೆ.
ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿ ಧೋನಿಗೆ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ವಸತಿ ಉದ್ದೇಶಗಳಿಗಾಗಿ ಮಾತ್ರ ಹಂಚಿಕೆ ಮಾಡಲಾದ ಆಸ್ತಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿರಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಿವೇಶನವು ರಾಂಚಿಯ ಹರ್ಮು ರಸ್ತೆಯಲ್ಲಿದ್ದು, ಧೋನಿ ಈ ಹಿಂದೆ ರಿಂಗ್ ರಸ್ತೆಯಲ್ಲಿರುವ ತಮ್ಮ ಪ್ರಸ್ತುತ ನಿವಾಸಕ್ಕೆ ಸ್ಥಳಾಂತರಗೊಳ್ಳುವ ಮೊದಲು ಅಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
