Trending

“ಈ ಬಾರಿ ಉತ್ತಮ ಮಳೆ..” : ಭವಿಷ್ಯ ನುಡಿದ ಶ್ರೀ ಮಳೆ ರಾಜೇಂದ್ರಸ್ವಾಮಿ

Spread the love

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುನರ್ವಸು, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ, ಉತ್ತರಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂದು ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ವಾಣಿ ನುಡಿದಿದೆ.

ಈ ಭಾಗದ ಕೃಷಿಕರ ಮಠವೆಂದೇ ಖ್ಯಾತಿ ಪಡೆದಿರುವ ಮುರನಾಳ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ  ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ) ದಲ್ಲಿ ಈ ಸೂಚನೆ ದೊರೆತಿದೆ.

ಈ ವರ್ಷದ ಮುಂಗಾರಿನಲ್ಲಿ ರೋಹಿಣಿ ಉತ್ತಮ, ಆರಿದ್ರಾ ಸಂಪೂರ್ಣ, ಪುನರ್ವಸು, ಪುಷ್ಯಾ ಸಾಧಾರಣವಾಗಿ ಬೀಳಲಿವೆ. ಹಿಂಗಾರಿನಲ್ಲಿ ಮಗಿ ಉತ್ತಮ, ಉತ್ತರಿ ಸಂಪೂರ್ಣ, ಹುಬ್ಬಿ, ಚಿತ್ತ, ಸ್ವಾತಿ ಸಾಧಾರಣವಾಗಿ ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆತಿದೆ ಎಂದು ಶ್ರಿ ಮಠದ ಮಠಾಧೀಶ ಗುರುಲಿಂಗಸ್ವಾಮಿ ಮಹಾಪುರುಷ ಅವರು ನೆರೆದ ಭಕ್ತಾಧಿಗಳಿಗೆ ತಿಳಿಸಿದರು.

ಪ್ರತಿ ವರ್ಷದಂತೆ ಹೊಸ ಮುರನಾಳದಲ್ಲಿ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗದಲ್ಲಿ (ಮಳೆ ಬೆಳೆ ಸೂಚನೆ) ಈ ವರ್ಷವು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಮಳೆ ಸೂಚನೆಗಾಗಿ ಕತೂಹಲದಿಂದ ಕಾದು ನಿಂತಿದ್ದರು. ಮಳೆ-ಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ – ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೇ ವಿಚಾರ ವಿನಿಮಯ ಮಾಡಿಕೊಂಡರು

[pj-news-ticker]