ಮಂಗಳೂರು: ದೈವ ನರ್ತನದ ಹೃದಯಾಘಾತವಾಗಿ ದೈವ ನರ್ತನರೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ ನಡೆದಿದೆ.
ಪದವಿನಂಗಡಿ ಗಂಧಕಾಡು ನಿವಾಸಿ 47 ವರ್ಷದ ದೈವ ನರ್ತಕ ಅಶೋಕ್ ಬಂಗೇರ ಅವರು ಸಾವನ್ನಪ್ಪಿದ್ದಾರೆ.
ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಅಶೋಕ್ ಬಂಗೇರ ಅವರಿಗೆ ಲಘುವಾಗಿ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ಆಸ್ಪತ್ರೆಗೆ ತೆರಳಿದ್ದರು. ಆದರೆ, ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.