Trending

ಪ್ರೇಮ ವೈಫಲ್ಯ… ಆತ್ಮಹತ್ಯೆಗೆ ಯತ್ನಿಸಿದ ಯುವಕ, ರಕ್ಷಣೆ ಮಾಡಿದ ಭದ್ರಾವತಿ ಪೊಲೀಸರು

Spread the love

 ಭದ್ರಾವತಿ : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬನು ರೈಲ್ವೆ ‌ಟ್ರ್ಯಾಕ್ ಮೇಲೆ‌ ಮಲಗಿ ಆತ್ಮಹತ್ಯೆ ಯತ್ನಿಸಿದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನ ರಕ್ಷಣೆ ಮಾಡಿರುವ ಘಟನೆ  ನಗರದ ಹುತ್ತ ಬಳಿ  ನಡೆದಿದೆ.

18 ವರ್ಷದ ದುರಗೇಶ್ ಎಂಬುವನು ಪ್ರೇಮ ವೈಫಲ್ಯದಿಂದ ಮನನೊಂದಿದ್ದ. ಮನನೊಂದ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಯತ್ನಿಸಿ ಹಳಿ ಮೇಲೆ‌ ಮಲಗಿದ್ದ.

ಈ ವೇಳೆ ಮಾಹಿತಿ ಬಂದ ಕೂಡಲೇ ಗಸ್ತಿನಲ್ಲಿದ್ದ ಭದ್ರಾವತಿ ನ್ಯೂಟೌನ್ ಪೊಲೀಸರಾದ ನಾಗರಾಜ ಹಾಗೂ ಸಲೀಂ ಅವರು ಕೂಡಲೇ ಸ್ಥಳಕ್ಕೆ ಬಂದು ಯುವಕನನ್ನ ರಕ್ಷಣೆ ಮಾಡಿ ಠಾಣೆಗೆ ಕರೆತಂದು ಯುವಕನಿಗೆ ಮನವೊಲಿಸಿ, ಪೋಷಕರನ್ನ ಕರೆಸಿ ಯುವಕನನ್ನ ಮನೆಗೆ ಕಳಿಸಿದ್ದಾರೆ.

[pj-news-ticker]