Trending

ಸಾಗರ ಮಾರಿ ಜಾತ್ರೆಗೆ ವಿಶೇಷ ರೈಲು : ವೇಳಾಪಟ್ಟಿ ಇಲ್ಲಿದೆ

Spread the love

ಶಿವಮೊಗ್ಗ: ಸಾಗರದ ಐತಿಹಾಸಿಕ ಮಾರಿಕಾಂಬಾ ದೇವಿ ಜಾತ್ರೆಗೆ ಫೆ.3ರಿಂದ ಫೆ.10ರವರೆಗೆ ಯಶವಂತಪುರದಿಂದ ತಾಳಗುಪ್ಪಕ್ಕೆ ಹಾಗೂ ತಾಳಗುಪ್ಪದಿಂದ ಯಶವಂತಪುರಕ್ಕೆ ಚಲಿಸಲಿದೆ. ಈ ರೈಲು ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ಸಾಗರ ಕಡೆಗೆ

ರೈಲು ಸಂಖ್ಯೆ 06585 (ಯಶವಂತಪುರ – ತಾಳಗುಪ್ಪ): ಫೆ.3, ಫೆ.5, ಫೆ.8, ಫೆ.10ರಂದು ಯಶವಂತಪುರದಿಂದ ರಾತ್ರಿ 10.45ಕ್ಕೆ ಹೊರಟು ಬೆಳಗ್ಗೆ 5.05 ಗಂಟೆಗೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 06587 (ಯಶವಂತಪುರ – ತಾಳಗುಪ್ಪ): ಫೆ.6ರಂದು ಯಶವಂತಪುರದಿಂದ ರಾತ್ರಿ 10.45ಕ್ಕೆ ಹೊರಟು ಬೆಳಗ್ಗೆ 5.05 ಗಂಟೆಗೆ ತಾಳಗುಪ್ಪ ತಲುಪಲಿದೆ.

ರೈಲು ಸಂಖ್ಯೆ 16581 (ಯಶವಂತಪುರ – ತಾಳಗುಪ್ಪ): ಫೆ.3, ಫೆ.5, ಫೆ.8, ಫೆ.10ರಂದು ಯಶವಂತಪುರದಿಂದ ರಾತ್ರಿ 12.15ಕ್ಕೆ ಹೊರಟು ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ.

ಯಶವಂತಪುರ ಕಡೆಗೆ

ರೈಲು ಸಂಖ್ಯೆ 06586 (ತಾಳಗುಪ್ಪ – ಯಶವಂತಪುರ): ಫೆ.4, ಫೆ.6, ಫೆ.9, ಫೆ.11ರಂದು ತಾಳಗುಪ್ಪದಿಂದ ಬೆಳಗ್ಗೆ 9.30ಕ್ಕೆ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06588 (ತಾಳಗುಪ್ಪ – ಯಶವಂತಪುರ): ಫೆ.7ರಂದು ಬೆಳಗ್ಗೆ 9.30ಕ್ಕೆ ತಾಳಗುಪ್ಪದಿಂದ ಹೊರಟು ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 16582 (ತಾಳಗುಪ್ಪ – ಯಶವಂತಪುರ): ಫೆ.3, ಫೆ.5, ಫೆ.8, ಫೆ.10ರಂದು ರಾತ್ರಿ 10ಗಂಟೆಗೆ ತಾಳಗುಪ್ಪದಿಂದ ಹೊರಟು ಬೆಳಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.

[pj-news-ticker]