Trending

ಭದ್ರಾವತಿ : ನಯನ ಆಸ್ಪತ್ರೆಗೆ NABH–ISO ಮಾನ್ಯತೆ

Spread the love

ಭದ್ರಾವತಿ : ನಗರದ ನಯನ ಆಸ್ಪತ್ರೆ ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆಗೆ ನೀಡಲಾಗುವ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ (NABH) ಹಾಗೂ ಅಂತರರಾಷ್ಟ್ರೀಯ ಗುಣಮಟ್ಟ ಸಂಸ್ಥೆ (ISO) ಯ ಅತ್ಯುನ್ನತ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಭದ್ರಾವತಿ ನಗರದಲ್ಲಿ ಈ ಗೌರವಕ್ಕೆ ಪಾತ್ರವಾದ ಮೊಟ್ಟಮೊದಲ ಆಸ್ಪತ್ರೆ ನಯನ ಆಸ್ಪತ್ರೆಯಾಗಿದ್ದು, ಪ್ರಸ್ತುತ ಕಾರ್ಮಿಕರ ರಾಜ್ಯ ವಿಮಾ ನಿಗಮದ (ESI) ನೆಟ್‌ವರ್ಕ್ ಆಸ್ಪತ್ರೆಯಾಗಿ ಅಧಿಕೃತವಾಗಿ ನೋಂದಾಯಿಸಲಾಗಿದೆ. ಇದರ  ಸೌಲಭ್ಯ ಹೊಂದಿರುವ ಕಾರ್ಮಿಕರು ಹಾಗೂ ಅವರ ಕುಟುಂಬದವರು ದ್ವಿತೀಯ ಹಂತದ ಚಿಕಿತ್ಸೆಯನ್ನು ಈ ಆಸ್ಪತ್ರೆಯಲ್ಲಿ ಪಡೆಯಲು ಅವಕಾಶ ದೊರೆತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ,ಕುಮಾರಸ್ವಾಮಿಯವರು “NABH ಮತ್ತು ISO ಮಾನ್ಯತೆಗಳೊಂದಿಗೆ ESI ಎಂಪನೆಲ್‌ಮೆಂಟ್ ದೊರೆತಿರುವುದು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಅಂತರ ರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡಲು ನಮಗೆ ಸಹಕಾರಿಯಾಗಿದೆ, ಅಲ್ಲದೆ ತಾಲೂಕಿನ ಜನತೆಗೆ ಗುಣಮಟ್ಟದ ಚಿಕಿತ್ಸೆಗಾಗಿ ಮೆಟ್ರೋ ನಗರಗಳಿಗೆ ಅಲೆಯುವುದನ್ನು ತಪ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆಎಂದು ತಿಳಿಸಿದರು.

[pj-news-ticker]