Trending

ಫೆಬ್ರವರಿ 17ರಂದು ಭದ್ರಾವತಿಯಲ್ಲಿ ಕಾಮ್ರೇಡ್ ಡಿ.ಸಿ. ಮಾಯಣ್ಣ ಸ್ಮರಣಾ ಕಾರ್ಯಕ್ರಮ

Spread the love

ಭದ್ರಾವತಿ: ಕ್ಷೇತ್ರದ ಜನ ಎಂದಿಗೂ ಮರೆಯಲಾಗದ ಸರಳ ಬದುಕಿನ ಕಾರ್ಮಿಕ ಹೋರಾಟಗಾರ ದಿವಂಗತ ಕಾಮ್ರೇಡ್ ಡಿ.ಸಿ. ಮಾಯಣ್ಣನವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಫೆಬ್ರವರಿ 17ರಂದು  ಕಾಮ್ರೇಡ್ ಡಿ.ಸಿ. ಮಾಯಣ್ಣ ಸ್ಮರಣಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ನಿವೃತ್ತ ಉಪನ್ಯಾಸಕ ಪ್ರೊ. ಎಂ. ಚಂದ್ರಶೇಖರಯ್ಯ ಹೇಳಿದರು.

ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಚಿತ್ರನಟ ಅಹಿಂಸಾ ಚೇತನ್, ರೈತ ಹೋರಾಟಗಾರ ಸಿದ್ದನಗೌಡ ಪಾಟೀಲ್, ಅಂಕಣಕಾರ ಶಿವಸುಂದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾಮಾನ್ಯ ಕಾರ್ಮಿಕನಾಗಿ ಜೀವನ ಆರಂಭಿಸಿದ ಮಾಯಣ್ಣನವರು ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಮಿಕರ ಅನೇಕ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿದ್ದರು ಎಂದರು. ಕಾರ್ಮಿಕ ಹೋರಾಟಗಳಷ್ಟೇ ಅಲ್ಲದೆ ಸಮಾಜದ ಎಲ್ಲ ರೀತಿಯ ಹೋರಾಟಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಸುರೇಶ್, ಎಚ್. ರವಿಕುಮಾರ್, ಜಿ. ರಾಜು, ವಿ. ವಿನೋದ್, ಚಿನ್ನಯ್ಯ, ಯಲ್ಲೋಜಿರಾವ್, ಹನುಮಕ್ಕ, ಸೆಲ್ವರಾಜ್, ಎಸ್.ಕೆ. ಸುಧೀಂದ್ರ, ಡಿ. ರಾಜು, ಕುಮಾರಸ್ವಾಮಿ ಜೆಬಿಟಿ ಬಾಬು, ತೀರ್ಥೇಶ್, ಪಿ. ಮೂರ್ತಿ, ನೇತ್ರಾವತಿ, ನಾಗವೇಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

[pj-news-ticker]