Trending

ಜ.22ರ ಅಧಿವೇಶನ ಸಿಎಂ ಸಿದ್ದರಾಮಯ್ಯರ ವಿದಾಯದ ಅಧಿವೇಶನ ಇರಬಹುದು: ಶಾಸಕ ಚನ್ನಬಸಪ್ಪ

Spread the love

ಶಿವಮೊಗ್ಗ: ಜನವರಿ 22ರಂದು ಕರೆದಿರುವ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನವಿರಬಹುದು. ಈ ಅಧಿವೇಶನವನ್ನು ವಿದಾಯದ ಭಾಷಣವಾಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪನವರು ಅಧಿವೇಶನ ಕರೆದಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ.

ತಮ್ಮ ಕಚೇರಿ ಕರ್ತವ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22ನೇ ತಾರೀಕಿನಿಂದ ಅಧಿವೇಶನ ಕರೆಯುತ್ತಿದ್ದಾರೆ. ಅವರು ಮಾಡುತ್ತಿರುವ ತರಾತುರಿ ನೋಡುತ್ತಿದ್ದರೆ ನನಗೆ ಅವರದು (ಸಿಎಂ ಸಿದ್ದರಾಮಯ್ಯ) ಇದು ಕೊನೆ ಅಧಿವೇಶನ ಅನ್ನಿಸಲು ಪ್ರಾರಂಭವಾಗುತ್ತಿದೆ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಅನಿಸುತ್ತದೆ. ಬರಲಿ, ಯಾರು ಬಂದರೂ ಇನ್ನು ಮುಂದೆಯಾದರೂ ಅಭಿವೃದ್ಧಿ ಮಾಡುವುದರ ಬಗ್ಗೆ ಯೋಚನೆ ಮಾಡಬೇಕು.

2.5 ವರ್ಷ ಅಭಿವೃದ್ಧಿ ನಿಂತು ಹೋಗಿರುವ ರಾಜ್ಯವಾಗಿದೆ. ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ಕಾರ್ಯವನ್ನು ಮಾಡುವಂತದ್ದು ಮುಂದೆ ಬರುವ ಮುಖ್ಯಮಂತ್ರಿಗಳು ಮಾಡುತ್ತಾರೆ ಎಂಬ ವಿಶ್ವಾಸವನ್ನು ಪ್ರಕಟ ಮಾಡುಬಹುದು ಇವತ್ತು. ಯಾಕೆಂದರೆ ಇದು ಬಜೆಟ್​ ಅಧಿವೇಶನವಲ್ಲ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಬಜೆಟ್​ ಅಧಿವೇಶನ ಮಾಡುತ್ತಾರೆ ಎಂದೆನಿಸುತ್ತಿದೆ” ಎಂದು ಭವಿಷ್ಯ ನುಡಿದರು.

ವಿ ಬಿ ರಾಮ್ ಜೀ ಪ್ರತಿಭಟನೆಯಿಂದ ಕಾಂಗ್ರೆಸ್​ಗೆ ಅನುಕೂಲವಾಗಲ್ಲ: ರಾಜ್ಯ ಸರ್ಕಾರ ವಿಬಿ ರಾಮ್ ಜೀ ಯೋಜನೆ ವಿರೋಧ ಮಾಡುವುದಕ್ಕೆ ಈ ರೀತಿ ಅಧಿವೇಶನ ಕರೆಯುವ ಅವಶ್ಯಕತೆ ಇರಲಿಲ್ಲ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ಜಾರಿಗೆ ತಂದಿದೆ. ಈಗ ಕಾಂಗ್ರೆಸ್​ ಈ ಕುರಿತು ಪ್ರತಿಭಟನೆ ನಡೆಸಿದರೆ, ಅದು ಚುನಾವಣೆಗೆ ಅನುಕೂಲವಾಗಲ್ಲ” ಎಂದು ಹೇಳಿದರು.

[pj-news-ticker]