Trending

ದಲಿತರೊಬ್ಬರು ಸಿಎಂ ಆಗದಿರುವ ಬಗ್ಗೆ ನಮಗೆ ನೋವಿದೆ : ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ – ಸಚಿವ ಮುನಿಯಪ್ಪ

Spread the love

ಬೆಂಗಳೂರು: ರಾಜ್ಯದಲ್ಲಿ ದಲಿತ ಸಿಎಂ ಆಗದಿರೋದರ ಬಗ್ಗೆ ನಮಗೆ ನೋವಿದೆ.‌ ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲಾ ಆಗುತ್ತದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಬೆಂಗಳೂರಲ್ಲಿ ದಲಿತ ಸಿಎಂ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲೇ ಆಗಬೇಕು ಎಂದು ಇತ್ತು. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲ ಆಗುತ್ತದೆ. ಹೈಕಮಾಂಡ್​ಗೆ ಯಾವ ಕಾಲದಲ್ಲಿ ಏನು ಆಗಬೇಕು ಅಂತ ಗೊತ್ತಿದೆ. ಮಾಡುವ ಸ್ಥಾನದಲ್ಲಿ ಖರ್ಗೆಯವರು ಕೂತಿದ್ದಾರೆ. ನಾವು ಇನ್ನೇನು ಮಾತನಾಡೋದು ಎಂದರು.

ನಮಗೆ ಇದೊಂದು ನೋವಿದೆ. ಶೇ25ರಷ್ಟು ಇರುವ ಸಮುದಾಯ ಶೇ75ರಷ್ಟು ಮತಗಳನ್ನು ಕಾಂಗ್ರೆಸ್​ಗೆ ಹಾಕುತ್ತಾರೆ. ಇದೆಲ್ಲವನ್ನೂ ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮ ದೃಷ್ಟಿಕೋನ ಎಂದು ಪರೋಕ್ಷವಾಗಿ ದಲಿತ ಸಿಎಂ ಪರ ಬ್ಯಾಟ್ ಬೀಸಿದರು.

ನಾನು ಯಾರ ಪರನೂ ಇಲ್ಲ, ವಿರೋಧನೂ ಇಲ್ಲ: ಸಿಎಂ, ಡಿಸಿಎಂರಿಂದ ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ದೆಹಲಿಗೆ ಹೋಗೋ ವಿಚಾರ ಮಾತನಾಡಿದ್ರು. ಇದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಅವರು ಕರೆಯುತ್ತೇವೆ ಅಂದಿದ್ದಾರೆ. ಕರೆದು ಮಾತನಾಡುತ್ತಾರೆ. ನಾನು ಯಾರ ಪರನೂ ಇಲ್ಲ, ವಿರೋಧನೂ ಇಲ್ಲ. ಡಿಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿಎಂ ಕೂಡ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದರು.

ಅರಸು ಪಾಯ ಹಾಕಿದ್ದರು, ಇವರು ಮನೆ ಕಟ್ಟಿದ್ದಾರೆ. ಶೋಷಿತ ವರ್ಗಗಳಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ ಮೀಸಲಾತಿ ಮಾಡುವಾಗ ಎಲ್ಲರ ಅಭಿಪ್ರಾಯ ಪಡೆದು ಮಾಡಿದ್ದಾರೆ. ಇದೆಲ್ಲವೂ ಇತಿಹಾಸ ಪುಟಕ್ಕೆ ಸೇರುವ ಕೆಲಸಗಳು. ಸಂಘಟನೆಯಲ್ಲಿ ಡಿಕೆ ಶಿವಕುಮಾರ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. 136 ಸ್ಥಾನ ಬರಬೇಕು ಎಂದರೆ ಅಷ್ಟು ಸುಲಭ ಅಲ್ಲ ಎಂದರು.

[pj-news-ticker]