ಶಿವಮೊಗ್ಗ: ದೇಶೀಯ ವಿದ್ಯಾಶಾಲಾ ಸಮಿತಿಯ 2026–2031ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಕೆ. ಬಸಪ್ಪ ಗೌಡ ಅವರನ್ನು ಅಧ್ಯಕ್ಷರಾಗಿ ಹಾಗೂ ಎಸ್.ಪಿ. ದಿನೇಶ್ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಸೋಮವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಏಕಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಕಾರ್ಯದರ್ಶಿಯಾಗಿ ಎಸ್.ಪಿ.ದಿನೇಶ್, ಉಪಾಧ್ಯಕ್ಷರಾಗಿ ಜಿ.ಮಧುಸೂದನ್, ಸಹ ಕಾರ್ಯದರ್ಶಿಯಾಗಿ ಡಾ. ಸತೀಶ್‌ಕುಮಾರ್ ಶೆಟ್ಟಿ ಕೋಶಾಧ್ಯಕ್ಷರಾಗಿ ಎನ್.ಆರ್.ನಿತಿನ್, ನಿರ್ದೇಶಕರಾಗಿ ಕೆ.ಎನ್.ರುದ್ರಪ್ಪ ಕೊಳಲೆ, ಡಾ. ಡಿ.ಬಿ.ಅವಿನಾಶ್, ಎಂ.ರಾಜು, ಬಿ.ಗೋಪಿನಾಥ್, ಡಾ. ಎಚ್.ಮಂಜುನಾಥ್, ಡಾ. ಕೆ.ಎಸ್.ಪವಿತ್ರಾ, ಶಿಕ್ಷಕ ಪ್ರತಿನಿಧಿಗಳಾಗಿ ಡಾ. ಎಂ.ವೆಂಕಟೇಶ್, ಸವಿತಾ ಎನ್.ರಾವ್ ಆಯ್ಕೆಯಾಗಿದ್ದಾರೆ.
