Trending

ಬೈಕ್ ಅಪಘಾತ : ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದ ಸಚಿವ ಮಧು ಬಂಗಾರಪ್ಪ 

Spread the love

ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾನವೀಯತೆ ಮೆರೆದಿದ್ದಾರೆ.

ಭಾನುವಾರ ತಮ್ಮ ನಿವಾಸವಿರುವ ಕುಬಟೂರಿನಿಂದ ಹೊಸನಗರದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಹೊರಟಿದ್ದಾಗ, ಸೊರಬ ತಾಲೂಕಿನ ಕುಪ್ಪಗುಡ್ಡೆ ಗ್ರಾಮದ ಬಳಿ ಬೈಕ್ನಲ್ಲಿ ಹೊರಟಿದ್ದ ಗಂಡ-ಹೆಂಡತಿ ಹಾಗು ಮಗು ಅಪಘಾತದಿಂದ ಗಾಯಗೊಂಡಿದ್ದರು. ಇದನ್ನು ಕಂಡ ತಕ್ಷಣ ಸಚಿವರು, ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ನೀರು ಕುಡಿಸಿ, ತಮ್ಮ ವಾಹನದಲ್ಲಿಯೇ ಸೊರಬ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೆ, ಅಪಘಾತ ಎಸಗಿದ ಬೈಕ್ ಸವಾರನನ್ನು ಹುಡುಕುವಂತೆಯೂ ಪೊಲೀಸರಿಗೆ ಸೂಚನೆ ನೀಡಿದರು.

ನಂತರ ಸಚಿವರು ಬೇರೆ ವಾಹನದಲ್ಲಿ ಹೊಸನಗರಕ್ಕೆ ತೆರಳಿದರು. ತಮ್ಮ ಸಹಾಯಕರಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿ, ತಮಗೆ ತಿಳಿಸುವಂತೆಯೂ ಸೂಚಿಸಿದ್ದಾರೆ.

 

[pj-news-ticker]