Trending

ಸಿಲಿಂಡರ್ ಸೋರಿಕೆ – ಹೊತ್ತಿ ಉರಿದ ಶಾಲಾ ಓಮ್ನಿ : ತಪ್ಪಿದ ಭಾರೀ ಅನಾಹುತ

Spread the love

ಧಾರವಾಡ: ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಮಾರುತಿ ಓಮ್ನಿ ಶಾಲಾ ವಾಹನ ವಾಹನವು ಬೆಂಕಿಗೆ ಆಹುತಿಯಾದ ಘಟನೆ ನಗರದ ಮಣಿಕಂಠ ನಗರದಲ್ಲಿ ಸೋಮವಾರ ನಡೆದಿದೆ.

ಈ ವಾಹನವನ್ನು ಶಾಲಾ ಮಕ್ಕಳಿಗಾಗಿ ರಘು ಎಂಬಾತ ಬಾಡಿಗೆ ಹೊಡೆಯುತ್ತಿದ್ದ. ಸೋಮವಾರ ಕೂಡ ಶಾಲಾ ಮಕ್ಕಳನ್ನು ಶಾಲೆಗೆ ಬಿಟ್ಟು ತನ್ನ ಮನೆ ಎದುರು ಓಮ್ನಿ ನಿಲ್ಲಿಸಿದ್ದ. ಈ ವೇಳೆ ಗ್ಯಾಸ್ ಸಿಲಿಂಡ‌ರ್ ಸೋರಿಕೆಯಾಗಿ ಬೆಂಕಿ ತಗುಲಿದೆ. ಬೆಂಕಿ ಹತ್ತಿದ ಸಂದರ್ಭದಲ್ಲಿ ರಘು ಅಲ್ಲೇ ಇದ್ದಿದ್ದರಿಂದ ಆತನಿಗೂ ಗಾಯಗಳಾಗಿವೆ. ನೋಡ ನೋಡುತ್ತಿದ್ದಂತೆ ವಾಹನ ಹೊತ್ತಿ ಉರಿದಿದೆ. ಈ ಕೂಡಲೇ ಈ ವಿಷಯವನ್ನು ಅಗ್ನಿಶಾಮಕ ದಳದವರಿಗೆ ತಿಳಿಸಿದ್ದರಿಂದ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದೃಷ್ಟವಶಾತ್ ಶಾಲಾ ಮಕ್ಕಳಿದ್ದ ಸಂದರ್ಭದಲ್ಲಿ ಈ ಬೆಂಕಿ ಹೊತ್ತಿಕೊಂಡಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಆದರೆ ವಾಹನವಂತೂ ಸಂಪೂರ್ಣ ಸುಟ್ಟು ಕರಕಲಾಗಿದೆ.

[pj-news-ticker]