ಧಾರವಾಡ : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಉತ್ತಮವಾಗಿ ಜಾರಿ ಮಾಡುತ್ತಿದೆ. ಈ ಪೈಕಿ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಾಕಿ ಉಳಿದಿದ್ದು ನಿಜ. ಆದರೆ ಪ್ರತಿಯೊಬ್ಬರಿಗೂ ಸ್ವಿಸ್ ಬ್ಯಾಂಕ್ ನಲ್ಲಿರುವ 15 ಲಕ್ಷ ರೂ. ತರಿಸಿ ಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರು ಆ ಹಣವನ್ನು ಇನ್ನು ಯಾಕೆ ಕೊಟ್ಟಿಲ್ಲ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ‘ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಈ ವರೆಗೂ ಎಲ್ಲ ಹಣವನ್ನು ಬಿಡುಗಡೆ ಮಾಡಿದ್ದೇವೆ. ಕೇವಲ ಎರಡು ತಿಂಗಳು ಬಾಕಿ ಉಳಿದಿದ್ದಕ್ಕೆ ಇಷ್ಟು ಮಾತನಾಡುತ್ತಿದ್ದಾರೆ. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಎಲೆಕ್ಷನ್ ಗಾಗಿ ಬೇರೆ ರಾಜ್ಯಕ್ಕೆ ಇವರು ದುಡ್ಡು ಕೊಡುತ್ತಿದ್ದಾರೆ.ಇವರಿಗೇನು ನೈತಿಕತೆ ಇದೆ ಕೇಳಲು ಎಂದು ಲಾಡ್ ಕಿಡಿ ಕಾರಿದರು.
ಬಳ್ಳಾರಿ ಬಗ್ಗೆ ಗೊತ್ತಿಲ್ಲ
ಬಳ್ಳಾರಿ ಗಲಾಟೆ ವಿಚಾರದಲ್ಲಿ ಜನಾರ್ಧನ ರೆಡ್ಡಿ ಹತ್ಯೆಗೆ ಸ್ಕೆಚ್ ಬಗ್ಗೆ ನನಗೆ ಗೊತ್ತಿಲ್ಲ.ಸಂಚು ಯಾರು ಮಾಡಿದ್ದಾರೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ.ಬಳ್ಳಾರಿ ರಿಪಬ್ಲಿಕ್ ಅಂತ ಕೊಟ್ಟಿದ್ದು ನ್ಯಾ.ಸಂತೋಷ್ ಹೆಗಡೆ ಸಾಹೇಬರು. ಯಾರು ತಪ್ಪಿತಸ್ಥರು ಇದ್ದರೆ ಸತ್ಯ ಶೋಧನೆ ಸಮಿತಿ ತನಿಖೆ ಮಾಡಲಿದೆ ಎಂದರು.
