Trending

ಶಿವಮೊಗ್ಗ: ಲಾರಿಯಲ್ಲಿ ಮಲಗಿದ್ದ ಚಾಲಕ–ಕ್ಲೀನರ್ ಮೇಲೆ ಲಾಂಗ್ ತೋರಿಸಿ ದರೋಡೆ

Spread the love

ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಚಾಲಕ ಹಾಗೂ ಕ್ಲೀನರ್‌ಗೆ ಲಾಂಗ್ ತೋರಿಸಿ ಬೆದರಿಸಿ ಮೊಬೈಲ್ ಮತ್ತು ನಗದು ದರೋಡೆ ಮಾಡಿದ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ನಡೆದಿದೆ.

ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್ ಹಿತೇಶ್ ನಾಯಕ ಎಂಬವರು ಬಾಡಿಗೆಗಾಗಿ ಲಾರಿಯನ್ನು ಸಾಗರ ರಸ್ತೆಯಲ್ಲಿ ನಿಲ್ಲಿಸಿದ್ದರು. ಬೆಳಗಿನ ಜಾವ ಸುಮಾರು 4.30ರ ವೇಳೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ ಬೆದರಿಸಿದ್ದಾರೆ. ಈ ವೇಳೆ ಚಾಲಕ ಚಂದ್ರಶೇಖರ ಅವರ ಕಾಲಿಗೆ ಲಾಂಗ್ ಉಲ್ಟಾ ಮಾಡಿ ಹೊಡೆದಿದ್ದಾರೆ ಎನ್ನಲಾಗಿದೆ.

ಲಾರಿಯಲ್ಲಿದ್ದ ಸುಮಾರು 20 ಸಾವಿರ ರೂ. ನಗದು ಹಾಗೂ ಕ್ಲೀನರ್ ಹಿತೇಶ್ ನಾಯಕ ಅವರ ಮೊಬೈಲ್ ಫೋನ್ ಕಸಿದುಕೊಂಡು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

[pj-news-ticker]