Trending

ಶಿವಮೊಗ್ಗ: ಮಲವಗೊಪ್ಪ ಪೆಟ್ರೋಲ್ ಬಂಕ್ ಎದುರು ಚಾಕು ಇರಿತ : ವ್ಯಕ್ತಿ ಗಂಭೀರ

Spread the love

ಶಿವಮೊಗ್ಗ: ಮಲವಗೊಪ್ಪದ ಪೆಟ್ರೋಲ್ ಬಂಕ್ ಎದುರು ನಿನ್ನೆ ರಾತ್ರಿ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರಿಗೆ ಚಾಕು ಇರಿತದ ಘಟನೆ ನಡೆದಿದೆ.

ಮಲವಗೊಪ್ಪ ನಿವಾಸಿ ವಿನೋದ್ (35) ಚಾಕು ಇರಿತಕ್ಕೊಳಗಾದವರು. ಆರೋಪಿ ವಿಕ್ರಂ (42) ಎಂಬಾತ, ವೈಯಕ್ತಿಕ ಕಾರಣಕ್ಕೆ ನಡೆದ ಜಗಳದ ವೇಳೆ ವಿನೋದ್ ಅವರ ಮೇಲೆ ಚಾಕುವಿನಿಂದ ಮನಸೋ ಇಚ್ಛೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯ ತೀವ್ರತೆಯಿಂದ ವಿನೋದ್ ಅವರ ಮುಖ, ಕೈ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ವಿಕ್ರಂ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

[pj-news-ticker]