Trending

ಶಿವಮೊಗ್ಗ : ಟ್ರ್ಯಾಕ್ಟರ್‌ಗೆ ತಗುಲಿದ ವಿದ್ಯುತ್ ತಂತಿ: ಭತ್ತದ ಹೊರೆ ಸುಟ್ಟು ಭಸ್ಮ

Spread the love

ಶಿವಮೊಗ್ಗ: ಭತ್ತದ ಹೊರೆ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಭತ್ತದ ಹೊರೆ ಸುಟ್ಟುಹೋಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬಿಲ್ಗುಣಿ ಘಂಟೆತವರು ರಸ್ತೆಯಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು ಒಂದು ಎಕರೆ ಪ್ರದೇಶದ ಭತ್ತದ ಪೈರು ನಾಶವಾಗಿದ್ದು, ರೈತನಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.

ಸೋಮವಾರ ಮಧ್ಯಾಹ್ನ ಸಂಭವಿಸಿದ ಈ ಅನಾಹುತದಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಈ ದುರಂತಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳೀಯರ ಪ್ರಕಾರ, ರಸ್ತೆಯ ಮೇಲೆ ಜೋತು ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಜೆಇಇ ಮತ್ತು ಎಇಇ ಅವರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಈ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರಿದ್ದೇ ಈ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 1 ಎಕರೆಯಲ್ಲಿ ಬೆಳೆದಿದ್ದ 20 ಕ್ವಿಂಟಾಲ್​ಗಿಂತಲೂ ಹೆಚ್ಚು ಭತ್ತ ಕೈಗೆ ಬಂದಿತ್ತಾದರೂ ಸಾಗಿಸುವಾಗ ವಿದ್ಯುತ್ ತಂತಿಯಿಂದಾಗಿ ಸುಟ್ಟುಹೋಗಿದೆ.

[pj-news-ticker]