Trending

ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಮಗ : ಶವಸಂಸ್ಕಾರ ವೇಳೆ ಸಿಕ್ಕಿಬಿದ್ದ

Spread the love

ಚಿಕ್ಕಬಳ್ಳಾಪುರ : ಮದ್ಯ ಸೇವಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಮಗ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರಿನ ನೆಹರುನಗರದಲ್ಲಿ ದುಷ್ಕೃತ್ಯ ನಡೆದಿದೆ.

55 ವರ್ಷದ ತಂದೆ ಗಂಗಣ್ಣಗೆ ರಿಪೀಸ್ ಪಟ್ಟಿಯಿಂದ ಹೊಡೆದು ಪುತ್ರ ಸಂಜಯ್ ಕುಮಾರ್ ಕೊಲೆ ಮಾಡಿದ್ದಾರೆ. ಸದ್ಯ ಸಂಜಯ್ ಕುಮಾರ್(25)ನನ್ನು ಬಂಧಿಸಿದ ಗೌರಿಬಿದನೂರು ಟೌನ್ ಠಾಣೆ ಪೊಲೀಸರು, ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆರೋಪಿ ಸಂಜಯ್ ಕುಮಾರ್​, ತಂದೆಯನ್ನ ಕೊಂದು ಶವಸಂಸ್ಕಾರಕ್ಕೆ ಮುಂದಾಗಿದ್ದ. ವಿಚಾರ ತಿಳಿದು ಗೌರಿಬಿದನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ತಪಾಸಣೆ ವೇಳೆ ಪುತ್ರನೇ ಅಪ್ಪನನ್ನು ಕೊಂದಿದ್ದು ಕಂಡುಬಂದ ಹಿನ್ನೆಲೆ ಅರೆಸ್ಟ್​ ಮಾಡಿದ್ದಾರೆ.

[pj-news-ticker]