Trending

ಹೊಳೆಹೊನ್ನೂರು: ಕಾರು – ಬೈಕ್ ಡಿಕ್ಕಿ : ವ್ಯಕ್ತಿ ಸಾವು

Spread the love

ಹೊಳೆಹೊನ್ನೂರು: ಸಮೀಪದ ಅರಹತೋಳಲು ಕೈಮರದ ಬಳಿ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಭಗವತಿಕೆರೆ ಗ್ರಾಮದ ನಾಗನಾಯ್ಕ್ (50) ಮೃತ ದುರ್ದೃವಿ. ಭಗವತಿಕೆರೆಯ ನಾಗನಾಯ್ಕ್  ಅರಹತೋಳಲು ಕೈಮರದ ಹೊಟೆಲ್‌ನಲ್ಲಿ ತಿಂಡಿ ತಿಂದು ಆಯುಧ ಪೂಜೆ ತಯಾರಿಗೆ ಹೂವು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ನಾಗನಾಯ್ಕ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಕಾರು ಬೆಂಗಳೂರಿನಿಂದ ಕುಮುಟದ ಕಡೆಗೆ ಶಿವಮೊಗ್ಗ ಮಾರ್ಗವಾಗಿ ಹೋಗುತ್ತಿತ್ತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]