Trending

‘ರಾಮ ಶಾಮ ಭಾಮ‌’ ಖ್ಯಾತಿಯ ನಟ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ

Spread the love

ಬೆಂಗಳೂರು: ರಂಗಭೂಮಿ ಕಲಾವಿದ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಾಸ್ಯ ನಟ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟನಿಗೆ 62 ವರ್ಷಗಳಾಗಿತ್ತು.

ಸೂಪರ್​ ಹಿಟ್ ‘ರಾಮ ಶಾಮ ಭಾಮ‌’ ಸಿನಿಮಾ ಖ್ಯಾತಿಯ ಹಾಸ್ಯನಟ ಬೆಂಗಳೂರಿನ ಬನ್ನೇರುಘಟ್ಟದ ಪೋರ್ಟಿಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.

ಇವರು ರಂಗಭೂಮಿ ತೊಡಗಿಸಿಕೊಂಡಿದ್ದರು. ಹಲವು ಖ್ಯಾತ ನಾಟಕಗಳನ್ನು ನಿರ್ದೇಶಶಿಸುತ್ತಿದ್ದರು. ಸದ್ಯ ಪತ್ನಿ ಮಾಲತಿ ದೇಶಪಾಂಡೆ ಹಾಗೂ ಮಗಳನ್ನು ಅಗಲಿದ್ದಾರೆ. ಅಭಿಮಾನಿಗಳೂ ಸೇರಿ ಕನ್ನಡ ಚಿತ್ರರಂಗದಿಂದ ಸಂತಾಪ ವ್ಯಕ್ತವಾಗುತ್ತಿದೆ.

ಇವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಇವರು ನಟಿಸಿ, ನಿರ್ದೇಶಿಸಿರುವ ‘ಆಲ್​ ದಿ ಬೆಸ್ಟ್​ ನಾಟಕ’ ಅಭೂತಪೂರ್ವ ಯಶಸ್ಸು ಕಂಡಿದೆ. ಪತ್ನಿ ಮಾಲತಿ ಅವರೂ ಕೂಡಾ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಭಾಷೆಯಿಂದಲೇ ಕನ್ನಡಿಗರ ಮನಗೆದ್ದ ಹಾಸ್ಯ ನಟ: ರಂಗಭೂಮಿ ಹಾಗು ಕನ್ನಡ ಸಿನಿಮಾಗಳಲ್ಲಿ ತಮ್ಮ ಉತ್ತರ ಕರ್ನಾಟಕದ ಭಾಷೆಯಿಂದಲೇ ಕನ್ನಡಿಗರ ಮನಗೆದ್ದ ಹಾಸ್ಯ ನಟ ಇವರು. ಬಹುತಾರಾಗಣದ ಸೂಪರ್​ ಹಿಟ್​ ರಾಮ ಶಾಮ ಭಾಮ ಎಂಬ ಚಿತ್ರಕ್ಕೆ ಸಂಭಾಷಣೆ ಬರೆದು, ಪಾತ್ರವೊಂದಕ್ಕೆ ಜೀವ ತುಂಬಿದ್ದರು. ಇಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ ಹಾಸನ್ ಅವರ ಪಾತ್ರದಿಂದ ಉತ್ತರ ಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದಾರೆ.

ಯಶವಂತ್ ಸರದೇಶಪಾಂಡೆ ನಿಧನಕ್ಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದವರು ಕಂಬನಿ‌‌‌ ಮಿಡಿಯುತ್ತಿದ್ದಾರೆ.

[pj-news-ticker]