Trending

ಆದಾಯ ಮೀರಿ ಆಸ್ತಿ ಗಳಿಕೆ : ಕಾಂಗ್ರೆಸ್‌ ಶಾಸಕ ರಾಜೇಗೌಡ ವಿರುದ್ದ ಎಫ್‌ಐಆರ್

Spread the love

ಚಿಕ್ಕಮಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಕಾಂಗ್ರೆಸಿನ ಮತ್ತೊಬ್ಬ ಶಾಸಕನಿಗೆ ಸಂಕಷ್ಟ ಎದುರಾಗಿದ್ದು, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲು‌ ಮಾಡಲಾಗಿದೆ. ಶಾಸಕ ಟಿ.ಡಿ ರಾಜೇಗೌಡ, ಪತ್ನಿ ಪುಷ್ಪಾ, ಮಗ ರಾಜ್ ದೇವ್ ವಿರುದ್ಧ ಪ್ರಕರಣ ದಾಖಲಾಗಿದೆ.

2022 ರ ಡಿಸೆಂಬರ್ ನಲ್ಲಿ ಬಿಜೆಪಿ ಮುಖಂಡ ‌ದಿನೇಶ್ ಅವರು ಲೋಕಾಯುಕ್ತ ಮತ್ತು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗೆ ಖಾಸಗಿ ದೂರು ದಾಖಲಿಸಿದ್ದರು. ತನಿಖೆ ನಡೆಸಲು ಲೋಕಾಯುಕ್ತ ಎಸ್ಪಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ನವೆಂಬರ್ 17ರೊಳಗೆ ತನಿಖಾ ವರದಿ ಸಲ್ಲಿಸಲು ಕೋರ್ಟ್ ಸೂಚನೆ ನೀಡಿತ್ತು. ಇದೀಗ ಅದರಂತೆ ಎಫ್‌ ಐಆರ್‌ ದಾಖಲಾಗಿದೆ.

ಸೆಕ್ಷನ್ 7, 8, 13, 120(B)420,193, 200 ಅಡಿ ಎಫ್‌ ಐಆರ್ ದಾಖಲು‌ ಮಾಡಲಾಗಿದೆ.

[pj-news-ticker]