Trending

74 ಸೋಪ್ ಬಾಕ್ಸ್ ನಲ್ಲಿತ್ತು 8 ಕೋ. ಮೌಲ್ಯದ ಡ್ರಗ್ಸ್, ಇಬ್ಬರ ಬಂಧನ

Spread the love

ಗುವಾಹಟಿ: ಅಸ್ಸಾಂ ಪೊಲೀಸರು ಮಂಗಳವಾರ ರಾತ್ರಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಎಂಟು ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಪುರದ ಚುರಚಂದ್‌ಪುರದಿಂದ ಅಸ್ಸಾಂ ಗೆ ಕೆಂಪು ಬಣ್ಣದ ಹುಂಡೈ ಐ10 ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅಸ್ಸಾಂ ನ ಅಮಿಂಗಾವ್‌ನಲ್ಲಿ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ ಆದರೆ ಈ ವೇಳೆ ಕಾರಿನಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ ಬಳಿಕ ಕೂಲಂಕುಷವಾಗಿ ಪರಿಶೀಲಿಸಿದ ವೇಳೆ ಕಾರಿನ ಬಾಗಿಲಿನ ಒಳಗೆ ಹಾಗೂ ಕಾರಿನ ಡಿಕ್ಕಿಯಲ್ಲಿದ್ದ ಚಕ್ರದ ಟ್ಯೂಬ್ ಒಳಗೆ ಸೋಪ್ ಬಾಕ್ಸ್ ಗಳು ಪತ್ತೆಯಾಗಿವೆ ಇದನ್ನು ತೆರೆದು ನೋಡಿದಾಗ ಅದರಲ್ಲಿ ಮಾದಕ ವಸ್ತುಗಳು ಇರುವುದು ಪತ್ತೆಯಾಗಿದೆ.

74 ಸೋಪ್ ಬಾಕ್ಸ್ ನಲ್ಲಿ ಮಾದಕ ವಸ್ತು ಸಾಗಾಟ:
ಕಾರಿನ ಬಾಗಿಲು ಹಾಗೂ ಟಯರ್ ಟ್ಯೂಬ್ ನಲ್ಲಿ 74 ಸೋಪ್ ಬಾಕ್ಸ್ ಪತ್ತೆಯಾಗಿದ್ದು ಅದರಲ್ಲಿ ಸುಮಾರು 7.8 ಕೋಟಿ ಮೌಲ್ಯದ 910 ಗ್ರಾಮ್ಸ್ ಮಾದಕ ವಸ್ತು ಇರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ಬಂಧನ:
ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇದರ ಹಿಂದೆ ಬೇರೆ ಯಾರು ಇದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

8 ಕೋಟಿ ಮೌಲ್ಯದ ಸೊತ್ತು ವಶ:
7.8 ಕೋಟಿ ಮೌಲ್ಯದ ಡ್ರಗ್ಸ್ ಸೇರಿದಂತೆ ಕೃತ್ಯಕ್ಕೆ ಬಳಸಿದ, ಹುಂಡೈ ಐ10 ಕಾರು ಹಾಗೂ ಮೊಬೈಲ್ ಸೇರಿದಂತೆ ಒಟ್ಟು ಎಂಟು ಕೋಟಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

[pj-news-ticker]