Trending

ಹೊಸನಗರದ ಅಬ್ಬಿಫಾಲ್ಸ್​​ನಲ್ಲಿ ಪ್ರವಾಸಿಗ ಸಾವು

Spread the love

ಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಹೊಸನಗರದ ಅಬ್ಬಿಫಾಲ್ಸ್​​ ಗೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ. ರಮೇಶ್ (44) ಮೃತರು.

ಬೆಂಗಳೂರಿನ ನಾಗರಬಾವಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ಮೂಲತಃ ತಮಿಳುನಾಡಿನವರೆಂದು ತಿಳಿದು ಬಂದಿದೆ.

ರಮೇಶ್ ತನ್ನ ಭಾವ ಮತ್ತು ಸ್ನೇಹಿತರೊಂದಿಗೆ ಹೊಸನಗರದ ಪ್ರವಾಸಿ ಸ್ಥಳಗಳಿಗೆ ಆಗಮಿಸಿದ್ದರು. ಫಾಲ್ಸ್​​ನಲ್ಲಿ ಸ್ನಾನ ಮಾಡುವಾಗ ಬಂಡೆಕಲ್ಲಿನಿಂದ ಇಳಿದಿದ್ದು, ಹರಿವಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಫಾಲ್ಸ್​​ನ ಕೆಳಭಾಗದಲ್ಲಿ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗೆ ಹೊಸನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೊಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

[pj-news-ticker]