Trending

ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದಾಗಲೇ ಬೀದಿ ನಾಯಿ ದಾಳಿ – ಬಾಲಕನಿಗೆ ಗಂಭೀರ ಗಾಯ

Spread the love

ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಶಿವಮೊಗ್ಗದ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.

ಮಹಮ್ಮದ್ ತಸ್ಲೀಮ್ ಎಂಬುವರ ಪುತ್ರ 4 ವರ್ಷದ ಮೊಹಮ್ಮದ್ ತಮೀಮ್ ಗಾಯಗೊಂಡ ಬಾಲಕ ಎಂದು ಗುರುತಿಸಲಾಗಿದೆ.

ನಾಯಿ ದಾಳಿಯಿಂದ ಬಾಲಕನ ತುಟಿ ಭಾಗ ಬಳಿ ಗಂಭೀರ ಗಾಯವಾಗಿದೆ.

ಆತನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಾಲಕನ ಮೇಲೆ ನಾಯಿ ದಾಳಿ ನಡೆಸಿದ ತಕ್ಷಣವೇ ಸುತ್ತಮುತ್ತಲಿನ ನಿವಾಸಿಗಳು ನಾಯಿಯನ್ನು ಓಡಿಸಿ, ಬಾಲಕನ ರಕ್ಷಣೆ ಮಾಡಿದ್ದಾರೆ.

ಸೋಮಿಕೊಪ್ಪ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ತಕ್ಷಣವೇ ಪಾಲಿಕೆ ಆಡಳಿತ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

[pj-news-ticker]