Trending

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದ್ದು ಬಾಂಬ್: 9 ಮಂದಿ ಆಸ್ಪತ್ರೆಯಲ್ಲಿ

Spread the love

ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಂಡಿದ್ದು ಬಾಂಬ್ , 9 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಸ್ಪಷ್ಟನೆ ನೀಡಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಲೋಕ್ ಮೋಹನ್, ಎಫ್‌ಎಸ್‌ಎಲ್ ತಂಡ ಇಲ್ಲಿದ್ದು, ಎನ್‌ಐಎ ಮತ್ತು ಐಬಿಗೆ ಮಾಹಿತಿ ನೀಡಲಾಗಿದೆ. ಗಾಯಾಳುಗಳೆಲ್ಲರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಎಫ್ ಎಸ್ ಎಲ್ ತಂಡದಿಂದ ಪರಿಶೀಲನೆ ನಡೆಸುತ್ತಿದ್ದು ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಇನ್ನಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬಾಂಬ್ ಸ್ಕ್ವಾಡ್, ಶ್ವಾನ ದಳ, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ದೌಡಾಯಿಸಿದ್ದು ಉನ್ನತ ಮಟ್ಟದ ತಪಾಸಣೆ ನಡೆಸಿದ್ದಾರೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದ್ದು, ಒಂದು ಬ್ಯಾಂಗ್ ತಂದಿಟ್ಟ ನಂತರ ಭಾರಿ ಪ್ರಮಾಣದ ಸ್ಫೋಟ ನಡೆದಿದೆ ಎಂದು ಕೆಫೆ ಎಂಡಿ ದಿವ್ಯಾ ಪ್ರತಿಕ್ರಿಯಿಸಿದ್ದಾರೆ.

[pj-news-ticker]