Trending

ಶಿವಮೊಗ್ಗ: ತಮ್ಮನ ಸಾವಿನ ಸೇಡಿಗೆ ಅಣ್ಣನ ಕೊಲೆ; ಇಬ್ಬರು ಅಂದರ್

Spread the love

ಶಿವಮೊಗ್ಗ : ನಿನ್ನೆ ಸಂಜೆ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಹೆದ್ದಾರಿ ಪಕ್ಕದಲ್ಲಿ ಕೊಲೆ  ನೋಡಿದ ಜನರು ಗಾಬರಿಯಾಗಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಆನಂದಪುರ ಮತ್ತು ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಕೊಲೆ ಆಗಿದ್ದವರು ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ಎನ್ನುವುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.

ತಮ್ಮನ ಕೊಲೆಯ ಸೇಡಿಗೆ ಅಣ್ಣನ ಕೊಲೆ

ಒಂದೂವರೆ ವರ್ಷದ ಹಿಂದೆ ರಫೀಕ್ ತನ್ನ ಸ್ವಂತ ತಮ್ಮ ಸಲೀಂನನ್ನು  ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಜೈಲು ಸೇರಿದ್ದನು. ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ರಫಿಕ್ ಹೊರಗೆ ಬಂದಿದ್ದನು. ಸಲೀಂ ಕೊಲೆ ಪ್ರಕರಣದಲ್ಲಿ ರಫಿಕ್ ತಮ್ಮ ಹಾಗೂ ಕೊಲೆಯಾದ ಸಲೀಂನ ಅಣ್ಣ ಇನಾಯತ್ ದೂರುದಾರನಾಗಿದ್ದನು. ತಮ್ಮ ಕೊಲೆಯ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ತಮ್ಮನಿಗೆ ಜೀವ ಬೆದರಿಕೆ ಹಾಕಿದ್ದನು. ಇದಕ್ಕೆ ನಾವೇ ನಿನ್ನೆ ಜೀವ ತೆಗೆಯುತ್ತೇವೆ. ಇದಕ್ಕಾಗಿ ಎಲ್ಲ ಮೊದಲೇ ಇನಾಯತ್ ಎಲ್ಲ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದನು. ಪ್ಲ್ಯಾನ್ ನಂತೆ ರಫಿಕ್ನನ್ನು ನಂಬಿಸಿ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.

ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಹೋಗುವಾಗ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್ನಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ತಂದೆ ಕಂಗಾಲಾಗಿದ್ದರು.

ಒಂದೂವರೆ ವರ್ಷದ ಹಿಂದೆ ಕಿರಿ ಮಗ ಸಲೀಂ ಕೊಲೆ ಆಗಿತ್ತು. ಅಣ್ಣ ರಫಿಕ್ ಕೊಲೆ ಮಾಡಿ, ಬೇಲ್ ಮೇಲೆ ಬಂದ ಬಳಿಕ ಎಲ್ಲವೂ ಸರಿಯಾಗಿತ್ತು. ಆದ್ರೆ, ಆಸ್ತಿಯಾಗಿ ರಫಿಕ್ ತಮ್ಮ ಇನಾಯತ್ ಮತ್ತು ಮಗಳ ಮಗ ಸಮೀರ್ ಸೇರಿ ನಿನ್ನೆ ದೊಡ್ಡ ಮಗ ರಫಿಕ್ನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ತಂದೆ ಮಹ್ಮದ್ ಗೌಸ್ ಆಕ್ರೋಶ ಹೊರಹಾಕಿದ್ದಾರೆ.ಹೀಗೆ ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಅಣ್ಣ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ಅಣ್ಣ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರಗೆ ಬಂದಿದ್ದನು.

ಈ ನಡುವೆ ಕುಟುಂಬದಲ್ಲಿ ದ್ವೇಷದ ಹೊಗೆ ಹಾಗೆ ಇತ್ತು. ಇನಾಯತ್, ತಮ್ಮನನ್ನು ಕೊಲೆ ಮಾಡಿದ ರಫಿಕ್ಗೆ ಆಸ್ತಿಯಲ್ಲಿ ಯಾವುದೇ ಪಾಲು ನೀಡದಂತೆ ತಂದೆಗೆ ಖಡಕ್ ಆಗಿ ಹೇಳಿದ್ದನು. ಸಲೀಂಗೆ ಬರುವ ಎರಡು ಎಕರೆ ಪಾಲು ಇನಾಯತ್ಗೆ ಕೊಡುವುದಾಗಿ ತಂದೆ ಹೇಳಿದ್ದನು. ಆದ್ರೆ, ಇನಾಯತ್ ಮಾತ್ರ ರಫಿಕ್ಗೆ ಆಸ್ತಿ ಹಂಚಿಕೆಗೆ ವಿರೋಧ ಮಾಡಿದ್ದನು.

ಈ ನಡುವೆ ಇನಾಯತ್ ಮೇಲ್ನೋಟಕ್ಕೆ ತಮ್ಮನ ಕೊಲೆ ಮಾಡಿದ ಅಣ್ಣನ ಜೊತೆ ಚೆನ್ನಾಗಿಯೇ ಇದ್ದಂತೆ ಡ್ರಾಮಾ ಮಾಡುತ್ತಿದ್ದನು. ಆದ್ರೆ, ಒಳಗೆ ಮಾತ್ರ ಆತನ ರಕ್ತ ಕುದಿಯುತ್ತಿತ್ತು. ತಮ್ಮನ ಕೊಲೆ ಮಾಡಿದ ಕಿರಾತಕ ಅಣ್ಣನನ್ನು ಸುಮ್ಮನೆ ಬಿಡಬಾರದು ಎನ್ನುವ ತೀರ್ಮಾನಕ್ಕೆ ಬಂದಿದ್ದನು. ನಿನ್ನೆ ಇನಾಯತ್ ಪ್ಲ್ಯಾನ್ ಮಾಡಿ ತನ್ನ ಒಡಹುಟ್ಟಿದ ಅಣ್ಣನ ಬರ್ಬರ ಹತ್ಯೆ ಮಾಡಿದ್ದಾನೆ.

ಕೊಲೆಯ ಬಳಿಕ ಇನಾಯತ್ ಮತ್ತು ಕೊಲೆಯಾದ ರಫಿಕ್ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರ ಮೇಲೂ ಆನಂದಪುರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲು ಆಗಿದೆ. ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದವು ಅಣ್ಣ ಮತ್ತು ತಮ್ಮ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ. ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದ ಹೆತ್ತವರಿಗೆ ದೊಡ್ಡ ಆಘಾತವಾಗಿದೆ.

[pj-news-ticker]