Trending

ಶಿವಮೊಗ್ಗ ಎಸ್‌ಪಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತರಾಟೆ

Spread the love

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನ ವಿವಾದ ಸಂಬಂಧ ರಾಷ್ಟ್ರಭಕ್ತರ ಬಳಗದ ಪ್ರತಿಭಟನೆ ವೇಳೆ ಶನಿವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

“ನಿಮ್ಮ ಇಲಾಖೆ ಬದುಕಿದೆಯೋ ಇಲ್ಲವೊ ಗೊತ್ತಿಲ್ಲ. ರೈಲ್ವೆ ಇಲಾಖೆಯ ಕಂಬಿ ತಂದು ಮೈದಾನಕ್ಕೆ ಬೇಲಿ ಹಾಕಿದ್ದರು. ಅವರನ್ನು ಈತನಕ ಬಂಧಿಸಿಲ್ಲ. ಮತ್ಯಾಕೆ ನೀವು ಎಸ್.ಪಿ ಆಗಿದ್ದೀರಿ? ನಾವೇನು ಇಲ್ಲಿ ದನ ಕಾಯೋಕೆ ಬಂದಿದ್ದೇವಾ? ಈ ಹಿಂದೆ ನಾನು ಭಾಷಣ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿದ್ದೀರಿ. ಆಗ ಯಾರಾದರು ನಿಮಗೆ ದೂರು ನೀಡಿದ್ದರಾ? ಆದ್ದರಿಂದ ಕೂಡಲೆ ಕ್ರಮ ಕೈಗೊಳ್ಳಬೇಕು’ ಎಂದು ಈಶ್ವರಪ್ಪ ಆಗ್ರಹಿಸಿದರು.

ಆಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಮನವಿ ನೀಡುವಂತೆ ತಿಳಿಸಿದರು. ಇದರಿಂದ ಕೆರಳಿದ ಈಶ್ವರಪ್ಪ, “ಮನವಿ ಕೊಡಬೇಕು ಎಂದು ನೀವು ಹೇಳಬೇಕಾ? ನಿಮಗೆ ಕಣ್ಣು ಕಾಣುವುದಿಲ್ಲವೆ?’ ಎಂದು ಪ್ರಶ್ನಿಸಿದರು.

ಅದಕ್ಕೂ ಮೊದಲು ಭಾಷಣ ಮಾಡಿದ ಈಶ್ವರಪ್ಪ, ಯಾರು ಸಹ ಇನ್ನು ಮುಂದೆ ಈದ್ಗಾ ಮೈದಾನ ಎನ್ನಬೇಡಿ ಇದು ಆಟದ ಮೈದಾನ. ಅಧಿಕಾರಿಗಳಿಗೆ ಕಾಂಗ್ರೆಸ್ ನವರ ಬೆಂಬಲ ನೀಡುತ್ತಿದ್ದಾರೆ. ನ್ಯಾಯದ ಪರ ಅಧಿಕಾರಿಗಳು ತಿರ್ಮಾನ ಮಾಡಬೇಕು. ಇದೊಂದು ಒಳ್ಳೆಯ ಅವಕಾಶ ನಿಮಗೆ. ರಕ್ತದ ಕೊನೆ ಹನಿ ಇರುವವರೆಗೂ ಈ ಜಾಗದ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದರು.

ಎಸ್ಪಿ ಡಿಸಿ ಅವರೇ ನಿಮ್ಮಪ್ಪ ಓದಿಸಿದ್ದು ನ್ಯಾಯದ ಪರ ಕೆಲಸ ಮಾಡಲು. ಬ್ಯಾರಿಕೇಡ್ ಕಿತ್ತು ಬಿಸಾಕಿ ನಾವು ಮೈದಾನದ ಒಳಗಡೆ ಹೋಗಬೇಕಾಗುತ್ತದೆ. ಶಿವಮೊಗ್ಗ ನಗರದ ಜನಕ್ಕೆ ಜಾಗ ಬರುವವರೆಗೆ ಶಾಂತಿಯಿಂದ ಹೋರಾಟ ಮಾಡುತ್ತೇವೆ. ಹೋರಾಟಗಾರರು ಜೈಲಿಗೆ ಹೋಗಲು ಸಹ ಸಿದ್ದರಿರಬೇಕು. ನ್ಯಾಯ ಸಿಗಲಿಲ್ಲ ಎಂದರೆ ನಿಮ್ಮಕ್ಕಿಂತ ಮುಂಚೆ ಜೈಲಿಗೆ ಹೋಗಲು ನಾನು ಸಿದ್ಧ. ಎಸ್ಪಿ ಒಂದು ಕ್ಷಣವು ಎಸ್ಪಿಯಾಗಿ ಮುಂದುವರಿಯಬಾರದು. ಕೂಡಲೇ ಜಿಲ್ಲಾ ರಕ್ಷಣಾಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.

[pj-news-ticker]