Trending

ಸಂವಿಧಾನ ರಕ್ಷಣೆಗಾಗಿ ನಾವು ಪ್ರಾಣ ಕೊಡಲು ಸಿದ್ದ : ಪ್ರಿಯಾಂಕಾ ಗಾಂಧಿ

Spread the love

ಬೆಳಗಾವಿ: ಸಂವಿಧಾನ ಯಾವ ರೀತಿ ನಿಮ್ಮನ್ನು ಸುರಕ್ಷಿತವಾಗಿ ಇಟ್ಟಿದೆಯೋ ಅದೇ ರೀತಿ ಸಂವಿಧಾನವನ್ನು ನೀವು ಸುರಕ್ಷಿತವಾಗಿ ಇಡಲು ಸಂಕಲ್ಪ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕರೆ ನೀಡಿದರು.

ಬೆಳಗಾವಿಯಲ್ಲಿ ಇಂದು ನಡೆದ ಜೈ ಬಾಪು, ಜೈ ಭೀಮ ಮತ್ತು ಜೈ ಸಂವಿಧಾನ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಂವಿಧಾನ ಬದಲಾಯಿಸಿ ನಿಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ದುರ್ಬಲಗೊಳಿಸಲು ಹೊರಟಿರುವ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ಈ ಹೋರಾಟದಿಂದ ನೀವು ಹಿಂದೆ ಸರಿಯಬೇಡಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವುದನ್ನು ಸಹಿಸಬೇಡಿ. ರಾಹುಲ್ ಗಾಂಧಿ ಅವರು ಸಂವಿಧಾನದ ರಕ್ಷಣೆಗೆ ಹಗಲು ರಾತ್ರಿ ಹೋರಾಟ ನಡೆಸಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯವರಿಗೆ ರಾಹುಲ್ ಗಾಂದಿ ಕಂಡರೆ ಭಯ. ಅವರ ಮೇಲೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇ.ಡಿ ದಾಳಿ ಬೆದರಿಕೆ ಹಾಕಿದ್ದಾರೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ. ನಮ್ಮ ಪರಂಪರೆಗೆ ತ್ಯಾಗ ಬಲಿದಾನದ ಇತಿಹಾಸ ಇದೆ. ಸಂವಿಧಾನ ರಕ್ಷಣೆಗೆ ನಾವು ಪ್ರಾಣ ಕೊಡಲು ಸಿದ್ದ ಎಂದು ಪ್ರಿಯಾಂಕಾ ಗಾಂಧಿ ಬಿಜೆಪಿಗೆ ತಿರುಗೇಟು ನೀಡಿದರು.

[pj-news-ticker]