Spread the love

ಶಿವಮೊಗ್ಗ: ದಿನಗಳಲ್ಲಿ ನೀರಿನ ಹಾಹಾಕಾರ ಉಂಟಾಗಬಹುದು. 351 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ‌ ಯೋಜನೆ ನಡೆಯುತ್ತಿದೆ. ರಾಜ್ಯದಲ್ಲಿ ಬರಗಾಲದ ಛಾಯೆಯಿದೆ. ನಿರಂತರ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಐದು ಗಂಟೆ ನಿರಂತರ ವಿದ್ಯುತ್ ನೀಡಿದರೆ ರೈತರಿಗೆ ಸಮಸ್ಯೆಯಾಗದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಗಿಯುತ್ತಿದೆ. ಮುಂದಿನ ಸ್ಮಾರ್ಟ್ ಸಿಟಿ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತಾಡಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕ್ರಮ‌ ಕೈಗೊಳ್ಳುತ್ತೇವೆ ಎಂದರು.

9 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. 4 ಸಾವಿರ ಹೈದರಾಬಾದ್ ಕರ್ನಾಟಕಕ್ಕೆ ತೆಗೆದುಕೊಳ್ಳಬೇಕು. ಇದು ನ್ಯಾಯಾಲಯದಲ್ಲಿದೆ. ಆದಷ್ಟು ಬೇಗ ಇತ್ಯರ್ಥವಾಗಲಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ‌ ಎಜುಕೇಷನ್ ಕೊಡಲು ಯೋಜನೆ ಸಿದ್ದಪಡಿಸುತ್ತಿದ್ದೇವೆ. ಶಿಕ್ಷಕರಿಗೆ ತರಬೇತಿ ನೀಡಲು ಖಾಸಗಿ ಸಂಸ್ಥೆ ಜೊತೆ ಮಾತಾಡಿದ್ದೇವೆ. ಮಕ್ಕಳಿಗೆ ಪೌಷ್ಠಿಕಾಂಶ ನೀಡಲು ಸಿದ್ದತೆ ನಡೆಯುತ್ತಿದೆ. 23 ನೇ ತಾರೀಕಿನಂದು ಅದನ್ನು ಘೋಷಣೆ ಮಾಡುತ್ತೇನೆ. ನೋಟ್ ಬುಕ್ ಭಾರ ಕಡಿಮೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕರ್ನಾಟಕವನ್ನು ಬಸವಣ್ಣನ ನಾಡು ಎಂಬ ಹೆಸರು ಬದಲಿಸುವ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಎಂ.ಬಿ ಪಾಟೀಲ್ ಅವರು ವೈಯಕ್ತಿಕ ಅಭಿಪ್ರಾಯ ಕೊಟ್ಟಿದ್ದಾರೆ. ಬಸವಣ್ಣನವರು ಬಹಳ‌ ದೊಡ್ಡ ಸಮಾಜ ಸುಧಾರಕರು. ನಾನು ಆ ಬಗ್ಗೆ ಜಾಸ್ತಿ ಚರ್ಚೆ ಮಾಡಲು ಹೋಗುವುದಿಲ್ಲ. ತೀರ್ಮಾನವನ್ನು ಸರ್ಕಾರ ಮಾಡುತ್ತದೆ. ಬಸವಣ್ಣನವರ ಬಗ್ಗೆ ಬಹಳ ಅಪಾರ ಗೌರವ ಇದೆ. ಅವರ ಹಾಕಿ ಕೊಟ್ಟ ಮಾರ್ಗದರ್ಶನವನ್ನು ನಾನು ಸಿದ್ದರಾಮಯ್ಯ ನವರು ಅನುಸರಿಸುತ್ತೇವೆ ಎಂದರು.

 

Leave a Reply

Your email address will not be published. Required fields are marked *