ಶಿವಮೊಗ್ಗ: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ(ಜ4) ನೀರು ಬಿಡಲು ತಿರ್ಮಾನಿಸಲಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಹೇಳಿಕೆ ನೀಡಿದ್ದಾರೆ.
ಬಲದಂಡೆ ನಾಲೆಗೆ ಜ. 8 ರಿಂದ ನೀರು ಬಿಡುಗಡೆ ಮಾಡಲಾಗುತ್ತದೆ. 120 ದಿನ ನಿರಂತರ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತದೆ. ರೈತರು ಹಿಂಗಾರು ಬೆಳೆ ಬೆಳೆಯಲು ತಯಾರು ಮಾಡಿಕೊಳ್ಳಬಹುದು, ರೈತರು ಆತಂಕ ಪಡುವುದು ಬೇಡ. ನೀರು ಬಿಡುವ ತಿರ್ಮಾಣವನ್ನು ಸರಕಾರ ಮಾಡಿದೆ.ಭದ್ರಾ ಅಚ್ಚುಕಟ್ಟಿನ ರೈತರು ಯಾವ ವದಂತಿಗಳಿಗೂ ಕಿವಿಕೊಡಬಾರದು. 120 ದಿನದಲ್ಲಿ 32 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ಡಾ.ಅಂಶುಮಂತ್ ತಿಳಿಸಿದ್ದಾರೆ.
ಭದ್ರಾ ಎಡನಾಲೆಗೆ ಪ್ರತಿದಿನ 380 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತೇವೆ. ಬಲದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಭದ್ರಾ ಜಲಾಶಯದಲ್ಲಿ 66.964 ಟಿಎಂಸಿ ನೀರು ಇದೆ ಎಂದು ವಿವರ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು, ಕಾಡ ಆಡಳಿತಾಧಿಕಾರಿ ಸತೀಶ್, ತಾಂತ್ರಿಕ ಅಧಿಕಾರಿ ಪ್ರಶಾಂತ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
