Trending

ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ

Spread the love

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ತಂದೆ, ತಾಯಿ, ಸಹೋದರಿ ಸೇರಿದಂತೆ ಮೂವರನ್ನು ಹತ್ಯೆ ನಡೆಸಿರುವ ಭಯಾನಕ ಘಟನೆಯೊಂದು ನಡೆದಿದೆ.

ಮೃತರನ್ನು ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಪುತ್ರಿ ಕವಿತಾ (23) ಎನ್ನಲಾಗಿದ್ದು ಮಗ ಅರ್ಜುನ್ ಬೆಳಿಗ್ಗೆ ಎದ್ದು ವಾಕಿಂಗ್ ಹೋಗಿ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು ಮೂವರು ಮನೆಯೊಳಗೆ ರಕ್ತದ ಮಡುವಲ್ಲಿ ಬಿದ್ದಿದ್ದರು ಎನ್ನಲಾಗಿದೆ.

ಮೂವರಿಗೂ ಚಾಕುವಿನಿಂದ ಇರಿದು ಹತ್ಯಗೈಯಲಾಗಿದ್ದು ಅಲ್ಲದೆ ಮನೆಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎನ್ನಲಾಗಿದ್ದು ಯಾವುದೇ ಕಳ್ಳತನದ ಉದ್ದೇಶದಿಂದ ಕೊಲೆ ನಡೆದಿಲ್ಲ ಎನ್ನಲಾಗಿದೆ.

ಮಗ ಅರ್ಜುನ್ ಹೇಳಿಕೆ ಪ್ರಕಾರ ಇಂದು ಅಪ್ಪ ಅಮ್ಮನ ಮದುವೆ ವಾರ್ಷಿಕೋತ್ಸವ ಹಾಗಾಗಿ ಬೆಳಿಗ್ಗೆ ಎದ್ದವನೇ ಅಪ್ಪ ಅಮ್ಮನಿಗೆ ಶುಭಾಶಯ ತಿಳಿಸಿ ಬಳಿಕ ವಾಕಿಂಗ್ ತೆರಳಿದ್ದೆ ಆದರೆ ವಾಕಿಂಗ್ ಮುಗಿಸಿ ಹಿಂತಿರುಗುವಷ್ಟರಲ್ಲಿ ದುಷ್ಕರ್ಮಿಗಳು ಚಾಕು ಇರಿದು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

[pj-news-ticker]