Trending

ಸ್ವಗ್ರಾಮಕ್ಕೆ ತಲುಪಿದ ಬ್ರಹ್ಮಗಂಟು ಖ್ಯಾತಿಯ ನಟಿ ಶೋಭಿತಾ ಮೃತದೇಹ : ಇಂದು ಅಂತ್ಯಕ್ರಿಯೆ

Spread the love

ಹಾಸನ : ಕಿರುತೆರೆ ಖ್ಯಾತ ನಟಿ, ಬ್ರಹ್ಮಗಂಟು ಧಾರಾವಾಹಿಯಿಂದಲೇ ಪ್ರಖ್ಯಾತಿಗಳಿಸಿದ ಶೋಭಿತ ಶಿವಣ್ಣ ಹೈದರಾಬಾದ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಮೃತ ದೇಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ತಲುಪಿದ್ದು, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮಕ್ಕೆ ಹೈದ್ರಾಬಾದ್ ನಿಂದ ಮೃತದೇಹ ಸ್ಥಳಾಂತರಿಸಲಾಗಿದೆ. ಈ ವೇಳೆ ಮೃತದೇಹವನ್ನು ಕಂಡು ಶೋಭಿತ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಹೇರೂರು ಗ್ರಾಮದಲ್ಲಿ ಶೋಭಿತ ಅಂತ್ಯಸಂಸ್ಕಾರ ನಡೆಯಲಿದೆ. ಹೈದರಾಬಾದ್ ನಲ್ಲಿ ನಟಿ ಶೋಭಿತ ಆತ್ಮಹತ್ಯೆಗೆ ಶರಣಾಗಿದ್ದರು.

ಘಟನೆ ಹಿನ್ನೆಲೆ?

ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಟಿ ಶೋಭಿತಾ ಮತ್ತು ಸುಧೀರ್ ಹೈದರಾಬಾದ್ ನಲ್ಲಿ ನೆಲೆಸಿದ್ದರು. ನವೆಂಬರ್ 30ರ ರಾತ್ರಿ ಶೋಭಿತಾ ತಮ್ಮ ಸಹೋದರಿ ಜೊತೆ ಫೋನ್ ನಲ್ಲಿ ಕೆಲ ಕಾಲ ಮಾತನಾಡಿದ್ದಾರೆ. ಈ ವೇಳೆ ಕೂಡ ಕುಟುಂಬಸ್ಥರಿಗೆ ಯಾವುದೇ ಅನುಮಾನ ಬರದಂತೆ ಶೋಭಿತಾ ಮಾತನಾಡಿದ್ದಾರೆ.

ಇದಾದ ಬಳಿಕ ಮರುದಿನ ಮುಂಜಾನೆ ತಡವಾದ್ರೂ ಶೋಭಿತಾ ತಮ್ಮ ಕೊಣೆಯ ಬಾಗಿಲನ್ನು ತೆರೆಯದಿದ್ದಾಗ ಪತಿ ಸುಧೀರ್ ಅನುಮಾನಗೊಂಡು ರೂಮ್ ಬಾಗಿಲು ಒಡೆದಿದ್ದಾರೆ .ಈ ವೇಳೆ ಶೋಭಿತಾ ಫ್ಯಾನಿಗೆ ನೇಣು ಹಾಕಿಕೊಂಡಿರೋದು ಪತ್ತೆಯಾಗಿದೆ.

12ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಡೆಸಿದ್ದ ಶೋಭಿತಾ ಸಾವು ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲ ಕನ್ನಡಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಟಿ ಶೋಭಿತಾ ಸಾವಿಗೆ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಇದರ ನಡುವೆ ಕೆಲ ಅನುಮಾನಗಳು ಬಲಗೊಳ್ಳುತ್ತಿದೆ.

ಮದುವೆ ಬಳಿಕ ಶೋಭಿತ ಶಿವಣ್ಣ ಬಣ್ಣದ ಬದುಕಿನಿಂದ ಮಾತ್ರವಲ್ಲ, ತಮ್ಮ ಆಪ್ತರು, ಗೆಳೆಯರು, ಸಹ ನಟ ನಟಿಯರು ಸೇರಿದಂತೆ ಎಲ್ಲರಿಂದಲೂ ಅಂತರ ಕಾಯ್ದುಕೊಂಡಿದ್ದರು. ಪೋಷಕರನ್ನು ಹೊರತುಪಡಿಸಿದರೆ ಇನ್ಯಾರ ಜೊತೆಗೂ ಶೋಭಿತ ಶಿವಣ್ಣ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಎಲ್ಲರಿಂದಲೂ ದೂರ ಉಳಿದಿದ್ದರು. ಇದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಹೈದರಾಬಾದ್ ಮೂಲದ ಸುಧೀರ್ ಜೊತೆ ಶೋಭಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಶೋಭಿತಾ ಹೈದರಾಬಾದ್‌ನಲ್ಲೇ ನೆಲೆಸಿದ್ದರು. ಶೋಭಿತಾ ಮೃತದೇಹದ ಬಳಿ ಯಾವುದೇ ನೋಟ್ ಪತ್ತೆಯಾಗಿಲ್ಲ. ಆದರೆ ಶೋಭಿತಾ ಫೋನ್ ಪೊಲೀಸರು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

 

[pj-news-ticker]