Trending

ಎಡ ಕಣ್ಣಿನ ಬದಲು ಬಲ ಕಣ್ಣಿಗೆ ಶಸ್ತ್ರಚಿಕಿತ್ಸೆ… ಮನೆಗೆ ಬಂದಾಗಲೇ ಗೊತ್ತು ವೈದ್ಯರ ಯಡವಟ್ಟು

Spread the love

ಗ್ರೇಟರ್ ನೋಯ್ಡಾ: ವೈದ್ಯರ ಯಡವಟ್ಟಿನಿಂದ ಏಳು ವರ್ಷದ ಬಾಲಕನ ಎಡ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಬದಲು ಬಾಲಕನ ಬಲ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ:
ಏಳು ವರ್ಷದ ಬಾಲಕನ ಎಡ ಕಣ್ಣಿನಲ್ಲಿ ಆಗಾಗ ನೀರು ಬರುತ್ತಿರುವ ನಿಟ್ಟಿನಲ್ಲಿ ಬಾಲಕನ ಕಣ್ಣಿನ ಪರೀಕ್ಷೆ ನಡೆಸಲು ತಂದೆ ಗ್ರೇಟರ್ ನೋಯ್ಡಾದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಕಣ್ಣಿನಲ್ಲಿ ಪ್ಲಾಸ್ಟಿಕ್ ತರಹದ ವಸ್ತುವಿದೆ ಅದನ್ನು ಆಪರೇಷನ್ ಮಾಡಿ ತೆಗೆಯಬೇಕು, ಆಪರೇಷನ್ ಗೆ 45,000 ಖರ್ಚಾಗಲಿದೆ ಎಂದು ಹೇಳಿದ್ದಾರೆ. ಅದರಂತೆ ಅದೇ ದಿನ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಒಂದು ದಿನದ ಬಳಿಕ ಬಾಲಕನ್ನು ಡಿಸ್ಚಾರ್ಜ್ ಮಾಡಿದ್ದಾರೆ ಮನೆಗೆ ಬಂದ ಬಾಲಕನ ಕಣ್ಣಿಗೆ ಹಾಕಿದ ಬ್ಯಾಂಡೇಜ್ ನೋಡಿ ತಾಯಿ ಗಾಬರಿಗೊಂಡಿದ್ದಾರೆ ಅಲ್ಲದೆ ಬಾಲಕನ ಎಡ ಕಣ್ಣಿನಲ್ಲಿ ಸಮಸ್ಯೆ ಇದ್ದದ್ದು ಆದರೆ ಶಸ್ತ್ರಚಿಕಿತ್ಸೆ ನಡೆಸಿದ್ದು ಬಲ ಕಣ್ಣಿಗೆ ಎಂದು ಆಘಾತಗೊಂಡಿದ್ದಾರೆ.

ಕೂಡಲೇ ಬಾಲಕನನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ವೈದ್ಯರು, ಸಿಬ್ಬಂದಿ ಸೇರಿದಂತೆ ಯಾರೂ ಸೂಕ್ತ ಉತ್ತರ ನೀಡದೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕನ ಮನೆಯವರು ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದಾರೆ.

[pj-news-ticker]