Trending

ನಕ್ಸಲರ ಓಡಾಟದ ಸುದ್ದಿ : ಶೃಂಗೇರಿ ಬಳಿ ಇಬ್ಬರ ವಿಚಾರಣೆ ನಡೆಸಿದ ಪೊಲೀಸರು

Spread the love

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಕ್ಸಲರು ಕಾಣಿಸಿ ಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿನ ಕಾರ್ಕಳ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು ಸುದ್ದಿ ಹರಿದಾಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತು ಕೊಂಡಿರುವ ಪೊಲೀಸ್ ಇಲಾಖೆ ಇಬ್ಬರು ನಕ್ಸಲ್ ಸಿಂಪಥೈಸರನ್ನು (ನಕ್ಸಲ್ ಅನುಕಂಪಿತರು) ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರ್ಕಳ ತಾಲೂಕಿನಲ್ಲಿ ನಕ್ಸಲ್ ಕಾಣಿಸಿಕೊಂಡಿರುವ ಸುದ್ದಿ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದರು.

ಸೋಮವಾರ ಶೃಂಗೇರಿ ತಾಲೂಕು ನೆಮ್ಮಾರ್ ಸಮೀಪದ ಬುಕಡಿಬೈಲಿನಲ್ಲಿ ಇಬ್ಬರು ನಕ್ಸಲ್ ಅನುಕಂಪಿತ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

[pj-news-ticker]