Breaking
Sat. Oct 12th, 2024

ದೇಶ ವಿಭಜನೆ ಮಾಡುವುದೇ ಕಾಂಗ್ರೆಸ್‌ ಸಂಸ್ಕೃತಿ: ಸಂಸದ ಬಿ.ವೈ.ರಾಘವೇಂದ್ರ

By Mooka Nayaka News Feb 4, 2024
Spread the love

ಶಿವಮೊಗ್ಗ:ದೇಶ ವಿಭಜನೆ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿ. ಈಗಾಗಲೇ ದೇಶವನ್ನು ಮೂರು ಭಾಗ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಹ ಈ ಹೇಳಿಕೆಯನ್ನು ವಿರೋಧ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರಲ್ಲಿಯೇ ಭಿನ್ನ ಅಭಿಪ್ರಾಯ ಇದೆ. ಇದನ್ನು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು. 28 ಕ್ಷೇತ್ರದಲ್ಲೂ ಗೆಲ್ಲಲು ನಮ್ಮ ಸಂಘಟನೆ ಮುಂದಾಗಿದೆ.

ಲೋಕಸಭಾ ಯುದ್ಧಕ್ಕೆ ಬೂತ್‌ ಮಟ್ಟದಿಂದ ಕಾರ್ಯಕರ್ತರು ಅಣಿಯಾಗುತ್ತಿದ್ದಾರೆ. ದೇಶದಲ್ಲಿ 400 ಕ್ಷೇತ್ರ ಗೆಲ್ಲುವ ನಿರೀಕ್ಷೆ ಇದೆ. ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭಿವೃದ್ಧಿ ನೋಡಿ ನನ್ನನ್ನು ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ.

ಎಲ್‌.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವುದು ರಾಜಕೀಯ ಮುತ್ಸದ್ಧಿಗೆ ಸಿಕ್ಕ ಗೌರವ. ಸಿದ್ಧಾಂತಬದ್ಧರಾಗಿ ಹೋರಾಟ ಮಾಡಿದ ನಾಯಕ ಅವರು. ಅವರ ದೊಡ್ಡ ತಪಸ್ಸಿನಿಂದ ರಾಮಮಂದಿರ ನಿರ್ಮಾಣವಾಗಿದೆ.ರಾಮಮಂದಿರ ನಿರ್ಮಾಣ ಮಾಡಲು ದೊಡ್ಡ ಶಕ್ತಿಯಾಗಿ ಅಡ್ವಾಣಿಯವರು ನಿಂತಿದ್ದರು. ಹಿಂದೂಗಳ ಭಾವನೆಗೆ ಶಕ್ತಿ ಸಿಕ್ಕಿದ್ದು ಅಡ್ವಾಣಿಯವರ ಅವಧಿಯಲ್ಲಿ. ಭಾರತ ರತ್ನ ಅಡ್ವಾಣಿ ಅವರಿಗೆ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದರು.

Related Post