ಬೆಂಗಳೂರು : ಕಳೆದ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಂತಹ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಮತ್ತೊಂದು ಸ್ಫೋಟಕ ವಾದಂತಹ ವಿಷಯ ಬಹಿರಂಗವಾಗಿದ್ದು ಶಂಕಿತ 6 ಜನ ಉಗ್ರರಿಗೆ ಐಸಿಸ್ ನಂಟು ಇದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೆಖಿಸಿದ್ದು ಇದೀಗ ಬಹಿರಂಗವಾಗಿದೆ.
ಶಂಕಿತ ಉಗ್ರರಾದ ಅಬ್ದುಲ್ ಮತಿನ್, ಮಾಜ್ ಮುನೀರ್, ಮುಜಾಮಿಲ್ ಶರೀಫ್, ಮೊಹಮ್ಮದ್ ಶರೀಫ್, ಶಾಜೀಬ್ ಮತ್ತು ಅರಮತ್ ಅಲಿ ಐಸಿಸ್ ಜೊತೆ ಸಂಪರ್ಕ ಹೊಂದಿರುವುದು ಎನ್ಐಎ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ.ಬೆಂಗಳೂರಿನ ರಾಮೇಶ್ವರಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಶಂಕಿತ ಉಗ್ರರಿಗೆ ಐಸಿಸ್ ಗೆ ಸಂಪರ್ಕ ಇತ್ತು.
ಅಲ್ಲದೇ ಕೆಫೆ ಬಾಂಬ್ ಬ್ಲಾಸ್ಟ್ ಅಷ್ಟೇ ಅಲ್ಲದೆ ಐಸಿಸ್ ಇವರಿಗೆ ಮತ್ತೊಂದು ಕೆಲಸವನ್ನು ಕೂಡ ಇವರಿಗೆ ನೀಡಿತ್ತು. ಶಂಕಿತ ಉಗ್ರರಲ್ಲಿ ಪ್ರಮುಖ ನಾದವನಿಗೆ ಉಸ್ತುವಾರಿ ನೋಡಿಕೊಳ್ಳಲು ಸೂಚಿಸಿತ್ತು ಅಲ್ಲದೆ ಅವರಿಗೆ ಹಣದ ಸಹಾಯ ಕೂಡ ಐಸಿಸ್ ಮಾಡಿತ್ತು ಎಂಬ ಸ್ಪೋಟಕ ವಿಷಯ ಬಯಲಾಗಿದೆ.
ಏನೇ ಟಾಸ್ಕ್ ಕ್ಲಿಯರ್ ಮಾಡಿದರು ವಿಡಿಯೋ ಮಾಡಲು ಸೂಚನೆ ನೀಡಿತ್ತು. ಅದರಂತೆ ಶಂಕಿತ ಉಗ್ರರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿರುವ ಕುರಿತು ವಿಡಿಯೋ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಎಲ್ಲಾ ಅಂಶಗಳು ಎನ್ಐಎ ಸಲ್ಲಿಸಿರುವ ಚಾರ್ಜ ಶೀಟ್ ನಲ್ಲಿ ಉಲ್ಲೇಖವಾಗಿದೆ.