Trending

ಬಿಗ್ ಬಾಸ್ ಮನೆಯಲ್ಲಿರುವ ಜಗದೀಶ್ ಇನ್ನುಂದೆ ಲಾಯರ್ ಅಲ್ಲ: ವಕೀಲಿ ಪರವಾನಗಿ ರದ್ದು ಮಾಡಿದ ಬಾರ್ ಕೌನ್ಸಿಲ್!

Spread the love

ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಆವೃತ್ತಿ ಶುರುವಾಗಿದ್ದು ಮೊದಲ ದಿನದಿಂದಲೇ ಜಟಾಪಟಿಯ ಕಿಚ್ಚು ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ ವಕೀಲ್ ಜಗದೀಶ್ ಅಬ್ಬರ ಮಾಡುತ್ತಿದ್ದು ನಾನು ಲಾಯರ್ ಏನು ಬೇಕಾದರೂ ಮಾಡಬಹುದು ಎಂಬ ಅಹಂ ತೋರಿಸುತ್ತಿದ್ದಾರೆ. ಆದರೆ ಇದೀಗ ಜಗದೀಶ್ ಅವರು ಪಡೆದಿದ್ದ ವಕೀಲಿ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ ಎಂದು ವರದಿಯಾಗುತ್ತಿದೆ.

ನಕಲಿ ಅಂಕಪಟ್ಟಿ ಕೊಟ್ಟು ಪದವಿ ಹಾಗೂ ಎಲ್ಎಲ್ ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದು ಇದೀಗ ಅದು ನಕಲಿ ಅಂಕಪಟ್ಟಿ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲ ಪರವಾನಗಿಯನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.

 

[pj-news-ticker]