Breaking
Tue. Oct 8th, 2024

ಬೆಂಗಳೂರಿನ ಮಹಾಲಕ್ಷ್ಮಿ ಹತ್ಯೆಯ ಹಿಂದೆ ಹಲವರ ಪಾತ್ರ : ಕೊಲೆ ಕೇಸಿಗೆ ಸ್ಪೋಟಕ ತಿರುವು!

By Mooka Nayaka News Sep 24, 2024
Spread the love

ಬೆಂಗಳೂರು : ಬೆಂಗಳೂರಿನ ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಸಿಕ್ಕಿದ್ದು ಈ ಒಂದು ಕೊಲೆಯು ಕೇವಲ ಒಬ್ಬನಿಂದ ನಡೆದಿಲ್ಲ. ಇದರ ಹಿಂದೆ ಹಲವರ ಪಾತ್ರ ಇದೆ ಎಂದು ಪೊಲೀಸರ ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೌದು ವೈಯ್ಯಾಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಸುಮಾರು 50 ತುಂಡುಗಳಾಗಿ ಮೃತದೇಹವನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇರಿಸಲಾಗಿತ್ತು. ಕೊಲೆಯ ಹಿಂದೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ಇದೀಗ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಬಹಿರಂಗವಾಗಿದೆ.

ಮಹಾಲಕ್ಷ್ಮಿ ಕೊಲೆಯಾದ ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುವ ವೇಳೆ ಹಲವರ ಫಿಂಗರ್ ಪ್ರಿಂಟ್ ಇದೀಗ ಲಭ್ಯವಾಗಿದೆ. ಹಾಗಾಗಿ ಈ ಒಂದು ಕೊಲೆಯ ಹಿಂದೆ ಕೇವಲ ಒಬ್ಬ ವ್ಯಕ್ತಿಯದಲ್ಲದೆ ಹಲವು ವ್ಯಕ್ತಿಗಳ ಪಾತ್ರ ಇರುವುದು ತನಿಖೆಯ ವೇಳೆ ತಿಳಿದು ಬಂದಿದೆ.

ಈಗಾಗಲೇ ಜಾರ್ಖಂಡ್ ಮೂಲದ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ. ಜೊತೆಗೆ ಇನ್ಯಾರ ಪಾತ್ರ ಇದೆ ಮತ್ತು ಯಾವ ಆಯುಧದಲ್ಲಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Related Post