ತಿರುವನಂತಪುರಂ: ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ನಟ, ಶಾಸಕ ಎಂ. ಮುಖೇಶ್ ಅವರನ್ನು ಬಂಧಿಸಲಾಗಿದೆ.
ಹೇಮಾ ಸಮಿತಿ ವರದಿ ಸಲ್ಲಿಕೆಯಾದ ಬಳಿಕ ಮಾಲಿವುಡ್‌ನ ಕೆಲ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬರುತ್ತಿದೆ. ನಟ, ಶಾಸಕ ಮುಕೇಶ್ ವಿರುದ್ಧವೂ ಅತ್ಯಾಚಾರ ಆರೋಪ ಕೇಳಿ ಬಂದಿತ್ತು.
ಮುಕೇಶ್ ಮೇಲಿನ ಆರೋಪವೇನು?:
2010ರಲ್ಲಿ ಕೊಚ್ಚಿಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಕಲಾವಿದರ ಸಂಘವಾದ ʼಅಮ್ಮಾʼ ಸದಸ್ಯತ್ವ ನೀಡುತ್ತೇನೆ ಎಂದು ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಮಾಜಿ ನಟಿರೊಬ್ಬರು ಆರೋಪಿಸಿದ್ದರು.
ಈ ಸಂಬಂಧ ಮಂಗಳವಾರ ಎಸ್‌ಐಟಿ ಮುಕೇಶ್ ಅವರನ್ನು ವಿಚಾರಣೆ ನಡೆಸಿದೆ. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಅವರನ್ನು ಬಂಧಿಸಲಾಗಿದೆ.
ಬಂಧನದ ಬಳಿಕ ನಿರೀಕ್ಷಣಾ ಜಾಮೀನು ಆಧಾರದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ.
ವಡಕ್ಕಂಚೇರಿ,ಮರಡು ಠಾಣೆಯಲ್ಲಿ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.