ದಾವಣಗೆರೆ: ಒಂದೊಮ್ಮೆ ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಬಂದರೆ ನಾನೂ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಜೂನಿಯರ್, ಸೀನಿಯರ್ ಪ್ರಶ್ನೆ ಬರುವುದಿಲ್ಲ. ಶಾಸಕರು ಯಾರಿಗೆ ಬಹುಮತ ಕೊಡುತ್ತಾರೋ ಅವರಿಗೆ ಹೈಕಮಾಂಡ್ ಒಪ್ಪುತ್ತದೆ ಎಂದರು.
ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಹೈಕಮಾಂಡ್ ಆಶೀರ್ವಾದ ಇರುವವರೆಗೂ ಅವರೇ (ಸಿದ್ದರಾಮಯ್ಯ) ಮಾಡಲಿ ಎಂದು ತಿಳಿಸಿದರು.
ಕೆಲವರು ಬಾಯಿಗೆ ಬಂದಂತೆ ಮಾತನಾಡಿ ಕೊಂಡು ಹೋಗುವುದರಿಂದ ಯಾರಿಗೂ ಏನು ಪ್ರಯೋಜನ ಆಗುವುದಿಲ್ಲ. ಮಾತನಾಡಿದವರೇ ಹಗುರ ಆಗುತ್ತಾರೆ ಅಷ್ಟೇ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುತ್ತೇನೆ. ನಾನು ಬಿಡುವುದಿಲ್ಲ ಎಂದು ತಿಳಿಸಿದರು.