ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟ ಇವರ ಆಶ್ರಯದಲ್ಲಿ ಒಳ ಮೀಸಲಾತಿ – ಬಂಜಾರ ಸಮುದಾಯಕ್ಕೆ ಪೂರಕವೇ ಬಾಧಕವೇ ಒಂದು ಅವಲೋಕನ ರಾಜ್ಯ ಮಟ್ಟದ ವಿಚಾರ ಸಂಕಿರಣ ವನ್ನು ವಿಧಾನ ಸಭಾ ಉಪ ಸಭಾಪತಿ ರುದ್ರಪ್ಪ ಲಾಂಬಾಣಿ ಉದ್ಘಾಟಿಸಿದರು.
ಎಂಎಲ್ಸಿ ಪ್ರಕಾಶ್ ರಾಠೋಡ್,ಉಮೇಶ್ ಜಾದಾವ್ ಮಾತನಾಡಿದರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಬಂಜಾರ ಸಂಘದ ಅಧ್ಯಕ್ಷ ಆಶೋಕನಾಯ್ಕ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಶಾಸಕರಾದ ಅವಿನಾಶ್ ಜಾದವ್,ಡಾ. ಚಂದು ಲಾಂಬಾಣಿ, ಶಾರದ ಪೋರ್ಯಾನಾಯ್ಕ, ಮಾಜಿ ಶಾಸಕ ರಾಜೀವ್ ಕುಡುಚಿ, ಬಸವರಾಜನಾಯ್ಕ, ಮನೋಹರ ಐನಾಪೂರ ಹಾಗೂ ಮಾಜಿ ಸಂಸದ ಉಮೇಶ್ ಜಾದವ್, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ್ ನಾಯ್ಕ, ಮಾಜಿ ನಿಗಮದ ಅಧ್ಯಕ್ಷ ಬಾಲರಾಜ್ ನಾಯ್ಕ, ಒಕ್ಕೂಟದ ಕಾರ್ಯಧ್ಯಕ್ಷ ರಾಘವೇಂದ್ರನಾಯ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.