ಚಿಕ್ಕಮಗಳೂರು: ಆಸ್ತಿಯ ಆಸೆಗಾಗಿ ಅಕ್ಕಂದಿರುವ ಬಾವನ ಜತೆ ಸೇರಿ ಸಹೋದರನನ್ನೇ ಕೊಂದ ಘಟನೆ ತರೀಕೆರೆ ನಗರದಲ್ಲಿ ಇಂದು ನಡೆದಿದೆ.
ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ಘಟನೆ ನಡೆದಿದೆ. 43 ವರ್ಷದ ರಾಘವೇಂದ್ರ ಎಂಬವರು ಕೊಲೆಯಾದ ವ್ಯಕ್ತಿ. ರಕ್ತ ಸಂಬಂಧಿಗಳೇ ಬೆಳ್ಳಂಬೆಳಗ್ಗೆಯೇ ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಹಾಕಿದ್ದಾರೆ.
ಆಸ್ತಿಗಾಗಿ ಕುಟುಂಬಸ್ಥರ ಜೊತೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಬಾವನ ಜೊತೆಗೂಡಿ ಮೂವರು ಸಹೋದರಿಯರು ತಮ್ಮನನ್ನು ಕೊಲೆ ಮಾಡಿದ್ದಾರೆ. ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಹಾಕಿದ್ದಾರೆ.
ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.