Breaking
Mon. Oct 14th, 2024

ಶಾಲಾ ವಾರ್ಷಿಕೋತ್ಸವ ಮುಗಿಸಿ ವಾಪಸಾಗುವ ವೇಳೆ ಅಪಘಾತ; 4 ವಿದ್ಯಾರ್ಥಿಗಳ ದಾರುಣ ಸಾವು

By Mooka Nayaka News Jan 29, 2024
Spread the love

ಬಾಗಲಕೋಟೆ : ಶಾಲಾ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಬಳಿ ನಡೆದಿದೆ.

ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ‌. ಎಂಟಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ‌ವಾಗಿದೆ. ಶ್ವೇತಾ ಪಾಟೀಲ (16) , ಸಾಗರ ಕಡಕೋಳ (17), ಗೋವಿಂದ ಜಂಬಗಿ (13), ಬಸವರಾಜ್ ಕೊಟಗಿ (17) ಮೃತಪಟ್ಟ  ವಿದ್ಯಾರ್ಥಿಗಳು.ಅಲಗೂರು ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದಾಗ ತಡರಾತ್ರಿ 12 ಗಂಟೆಯ ಸುಮಾರಿಗೆ ಅಪಘಾತವಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮ ಮುಗಿಸಿ ಕವಟಗಿ ಗ್ರಾಮದ‌ ಕಡೆ ಹೊರಟಿದ್ದಾಗ ಎದುರಿನಿಂದ ಬಂದ ಟ್ರ್ಯಾಕ್ಟರಿಗೆ ಶಾಲಾ ವಾಹನ ಡಿಕ್ಕಿಯಾಗಿದೆ. ಜಮಖಂಡಿ ಗ್ರಾಮೀಣ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 

Related Post