ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದಂತ ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆಯ ಫಲಿತಾಂಶ, ಇಂದು ಮತ ಏಣಿಕೆಯ ಬಳಿಕ ಪ್ರಕಟಗೊಂಡಿದೆ. ಇಂದು ಪ್ರಕಟಿತವಾದಂತ ಶಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಯಾರೆಲ್ಲ ಗೆಲುವು ಸಾಧಿಸಿದ್ದಾರೆ ಎನ್ನುವ ಬಗ್ಗೆ ಮುಂದಿದೆ ಪಟ್ಟಿ.
ಈ ಕುರಿತಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ರಿಟರ್ನಿಂಗ್ ಅಧಿಕಾರಿಗಳ ಕಾರ್ಯಾಲಯದಿಂದ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಚುನಾವಣೆಯ ಅಂತಿಮ ಫಲಿತಾಂಶ ದಂತೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಿಂದ ಯಾರೆಲ್ಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಈ ಕೆಳಕಂಡಂತಿದೆ.
ಶಿವಮೊಗ್ಗ ವಿಭಾಗ
ಆನಂದ ಡಿ.ಬಿಎನ್ ಅವರು 131 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.
ಹೆಚ್.ಬಿ ದಿನೇಶ್ ಅವರು 115 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಆರ್.ಎಂ ಮಂಜುನಾಥಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಗರ ವಿಭಾಗ
ಟಿ ಶಿವಶಂಕರಪ್ಪ ಅವರು 162 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ದಯಾನಂದ ಗೌಡ್ರು ಟಿಎಸ್ ಅವರು 124 ಮತಗಳಿಂದ ಗೆಲುವು
ವಿದ್ಯಾಧರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ ವಿಭಾಗ
ಚೇತನ್ ಸೋಮಣ್ಣ ಅವರು 211 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಜಗದೀಶಪ್ಪ ಬಣಕಾರ್ ಅವರು 182 ಮತಗಳೊಂದಿಗೆ ವಿಜಯ ಸಾಧಿಸಿದ್ದಾರೆ.
ಹೆಚ್.ಕೆ ಬಸಪ್ಪ ಅವರು 176 ಮತಗಳಿಂದ ಗೆಲುವು
ಬಿಜಿ ಬಸವರಾಜಪ್ಪ ಅವರು 166 ಮತಗಳಿಂದ ಗೆಲುವು
ಚಿತ್ರದುರ್ಗ ವಿಭಾಗ
ಬಿಆರ್ ರವಿಕುಮಾರ್ ಎಂಬುವರು 163 ಮತಗಳಿಂದ ಗೆಲುವು
ಸಂಜೀವಮೂರ್ತಿ 134 ಮತಗಳಿಂದ ಗೆಲುವು
ರೇವಣಸಿದ್ದಪ್ಪ ಜಿಪಿ 109 ಮತಗಳನ್ನು ಪಡೆದು ಗೆಲುವು
ಜಿಬಿ ಶೇಖರಪ್ಪ 106 ಮತಗಳಿಂದ ಗೆಲುವು ಸಾಧಿಸಿದ್ದಾರೆ.