Breaking
Sun. Sep 8th, 2024

ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಯುವಕ; ಸ್ಥಳೀಯರಿಂದ ಬಿದ್ದ ಗೂಸಾ

By Mooka Nayaka News Aug 13, 2024
Spread the love

ಚಿಕ್ಕಮಗಳೂರು: ಭಿಕ್ಷೆ ಬೇಡಲು ಬುರ್ಖಾ ಧರಿಸಿ ನಗರಕ್ಕೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿರುವ ಘಟನೆ ನಡೆದಿದೆ.

ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡ ಯುವಕನ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಯುವಕನ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ.

ಹರೀಶ್ ಎಂಬ ಯುವಕನ ಕೈ ಬೆರಳು ಕಾಲು ನೋಡಿ ಅನುಮಾನಗೊಂಡ ಸ್ಥಳೀಯರು ಹಿಡಿದು ವಿಚಾರಿಸಿದ್ದಾರೆ. ಥೇಟ್ ಯುವತಿಯಂತೆ ಬುರ್ಖಾ ಧರಿಸಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ.

ಬಾಳೆಹೊನ್ನೂರು ಮೂಲದ ಹರೀಶ್ ಎಂಬ ಯುವಕನನ್ನು ಸ್ಥಳೀಯರು ಥಳಿಸಿದ್ದಾರೆ. ಭಿಕ್ಷೆ ಬೇಡಲು ಬುರ್ಖಾ ಧರಿಸಿ ಬಂದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಆದರೆ ಬುರ್ಖಾ ಒಳಗೆ ಚಾಕು ಇಟ್ಟುಕೊಂಡಿದ್ದ ಬಂದಿದ್ದು, ಸಾಕಷ್ಟು ಅನುಮಾನ ಹುಟ್ಟಿಸಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ತನಿಖೆ ವೇಳೆ ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿ ಮಾಡಿದ್ದಾಗಿ ಗೊತ್ತಾಗಿದೆ. ಬಸವನಹಳ್ಳಿ ಪೊಲೀಸರು ಯುವಕನ ವಿಚಾರಣೆಗೊಳಪಡಿಸಿ ತಹಶೀಲ್ದಾರ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Related Post