Breaking
Sun. Sep 8th, 2024

ಯಾದಗರಿ ಶಾಸಕ ಚೆನ್ನಾರೆಡ್ಡಿ‌ ಹಾಗೂ ಪುತ್ರನ ವಿರುದ್ಧ ಎಫ್ಐಆರ್

By Mooka Nayaka News Aug 3, 2024
Spread the love

LPಕಲಬುರಗಿ/ಯಾದಗಿರಿ: ಪಿಎಸ್ಐ ಸಾವಿನಲ್ಲಿ ಶಾಸಕ‌ ಚೆನ್ನಾರೆಡ್ಡಿ ಪಾಟೀಲ ಹಾಗೂ ಅವರ ಪುತ್ರ ಸನ್ನಿರೆಡ್ಡಿ ಪಾಟೀಲ ಕೈವಾಡ ಇರುವುದಾಗಿ ಮೃತ ಪಿಎಸ್ಐ ಪತ್ನಿ ದೂರು ನೀಡಿರುವ ಹಿನ್ನಲೆಯಲ್ಲಿ ಶಾಸಕ ಹಾಗೂ ಪುತ್ರ ಸನ್ನಿರೆಡ್ಡಿ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶಾಸಕ ಹಾಗೂ ಪುತ್ರನ ನಿರಂತರ ಒತ್ತಡದಿಂದ ನನ್ನ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ವರ್ಗಾವಣೆ ಮಾಡಿರುವುದು ಕೂಡ ನಿಯಮಬಾಹಿರ. ನನಗೆ ಅನ್ಯಾಯವಾಗಿದೆ. ಶಾಸಕ ಹಾಗೂ ಅವರ ಪುತ್ರ 30 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿದ್ದರು. ಕೊಡದೆ ಇದ್ದಾಗ ನನಗೆ ವರ್ಗಾವಣೆ ಮಾಡಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಪತ್ನಿ ಶ್ವೇತಾ ಅಪಾದನೆ ಮಾಡಿದ್ದಾರೆ.

ಅಲ್ಲದೆ ನನ್ನ ಪತಿಯ ಸಾವಿಗೆ ನೇರವಾಗಿ ಶಾಸಕರು ಹಾಗೂ ಅವರ ಪುತ್ರ ನೇರ ಕಾರಣ ಎಂದೂ ದೂರಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಸರಕಾರಕ್ಕೆ ಮತ್ತೊಂದು ಕಂಟಕ ಎದುರಾದಂತಾಗಿದೆ.

Related Post