Trending

ಭದ್ರಾ ಜಲಾಶಯದ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

Spread the love

ಶಿವಮೊಗ್ಗ: ಭದ್ರಾ ಜಲಾಶಯ ಭರ್ತಿಯಾಗಿದ್ದು ಬಾಗಿನ ಬಿಡುವುದು, ಜಲಾಶಯ ವೀಕ್ಷಣೆಗೆ ರೈತರು, ಸಾರ್ವಜನಿಕರು ಬರುತ್ತಿರುವುದರಿಂದ ಸುರಕ್ಷತೆಗೆ ಕಷ್ಟಸಾಧ್ಯವಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಒಂದು ತಿಂಗಳ ಕಾಲ ಜಲಾಶಯದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ವಿಧಿಸಿದೆ.

ಭದ್ರಾ ಜಲಾಶಯ ಭರ್ತಿಯಾಗಿರುವ ಕಾರಣ ಪ್ರತಿದಿನ ರೈತ ಮುಖಂಡರು, ಇತರರು ಬಾಗಿನ ಅರ್ಪಿಸಲು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವುದರಿಂದ ಭದ್ರತೆಗೆ ಧಕ್ಕೆಯಾಗುತ್ತಿದ್ದು ನಿಷೇಧಾಜ್ಞೆ ವಿಧಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ವಿಧಿಸಿ ಆದೇಶಿಸಿದ್ದಾರೆ.

ಜಲಾಶಯದ ಮೇಲೆ ಹೋಗುವುದನ್ನು ಸಂಪೂರ್ಣ ನಿಷೇಧಿಸಿದೆ. ಬಲದಂಡೆ, ಎಡದಂಡೆ ಕಾಲುವೆಗಳಿಗೆ ಇಳಿಯುವುದನ್ನು, ಫೋಟೋ ತೆಗೆಯುವುದನ್ನು ನಿಷೇಧಿಸಿದೆ. ಜಲಾಶಯದ ಸೆಕ್ಯೂರಿಟಿ, ಸಿಬ್ಬಂದಿಗೆ ತೊಂದರೆ ಕೊಡಬಾರದು, ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಆದೇಶಿಸಲಾಗಿದೆ.

[pj-news-ticker]