Trending

ವಸತಿ ಶಾಲೆಯ ಊಟದಲ್ಲಿ ಹಲ್ಲಿ… 50 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the love

ರಾಯಚೂರು: ಊಟದಲ್ಲಿ ಹಲ್ಲಿ ಬಿದ್ದು 50 ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಚಂದ್ರಬಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.

ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಬೆಳಗ್ಗೆ ಪಲಾವ್ ಸೇವನೆ ಮಾಡಿದ್ದಾರೆ, ಪಲಾವ್ ಅನ್ನದಲ್ಲಿ ಹಲ್ಲಿಯ ಚಿಕ್ಕಚಿಕ್ಕ ಮಾಂಸ ತುಂಡುಗಳು ಕಂಡು ಬಂದಿವೆ.

ಊಟ ಮಾಡಿದ ಕೆಲ ಹೊತ್ತಲ್ಲೇ ವಾಂತಿ ಭೇದಿ ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಕ್ಕಳನ್ನು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಡಿಹೆಚ್ಓ ಡಾ ಸುರೇಂದ್ರ ಬಾಬು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಟ್ಟು 300 ಮಕ್ಕಳಿದ್ದಾರೆ.

[pj-news-ticker]